ಉದಯವಾಹಿನಿ, ಕಲಬುರಗಿ: ಮಕ್ಕಳಿಗೆ ಪಾಠ ಮಾಡಿ ಭವಿಷ್ಯ ನಿರ್ಮಿಸಬೇಕಾದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಜೀವನದ ಜೊತೆ ಆಟವಾಡಿದ್ದಾನೆ. ಈ ಶಿಕ್ಷಕ ತನ್ನ ಕರ್ತವ್ಯವವನ್ನೇ ಮರೆತು ಮೃಗೀಯ ಅವತಾರ ತಾಳಿದ್ದಾನೆ. ಹೌದು, ಐದನೇ ತರಗತಿ ಓದುತ್ತಿರುವ 10 ವರ್ಷದ ವಿದ್ಯಾರ್ಥಿನಿ ಮೇಲೆ ಈ ಶಿಕ್ಷಕ ಅತ್ಯಾಚಾರ ಎಸಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಇದೀಗ ಈ ಕಾಮುಕ ಶಿಕ್ಷಕನ ವಿರುದ್ಧ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಂಧನ ಕೂಡ ಆಗಿದೆ.

ಶಿಕ್ಷಕನ ಕೃತ್ಯ ಖಂಡಿಸಿ ಯಡ್ರಾಮಿ ಬಂದ್!

ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಶಾಲಾ ಶಿಕ್ಷಕ ಹಾಜಿಮಲಂಗ ಆರೋಪಿ ಶಿಕ್ಷಕ. ನಿನ್ನೆ ಸಂಜೆ ಈ ಕಾಮುಕ ಶಿಕ್ಷಕನು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಶಿಕ್ಷಕನ ಈ ಕೃತ್ಯಕ್ಕೆ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಯಡ್ರಾಮಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!