ಉದಯವಾಹಿನಿ , ಬೆಂಗಳೂರು: ಕುಡಿದ ಮತ್ತಿನಲ್ಲಿ ಸಿಗರೇಟ್‌ನಿಂದ ಮರ್ಮಾಂಗ ಸುಟ್ಟು ದೊಣ್ಣೆಯಿಂದ ಹೊಡೆದು ಭೀಕರವಾಗಿ ಹತ್ಯೆಗೈದಿರುವ ಮಾದನಾಯ್ಕನಹಳ್ಳಿಯ ದಾರುಣ ಘಟನೆ ಭೋವಿತಿಮ್ಮನಪಾಳ್ಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭೋವಿತಿಮ್ಮನಪಾಳ್ಯದ ಪ್ರದೀಪ್ (೪೧) ಹಾಗೂ ಆರೋಪಿಯನ್ನು ಚೇತನ್ (೩೦) ಎಂದು ಗುರುತಿಸಲಾಗಿದೆ.
ಕಳೆದ ಡಿ.೧೯ ರಂದು ಕೊಲೆಯಾದ ಪ್ರದೀಪ್ ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದು, ಇದರಿಂದ ಇಬ್ಬರು ಬೇರೆಯಾಗಿದ್ದರು.ಆಕೆಯನ್ನು ಆರೋಪಿ ಚೇತನ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದು, ಇದರಿಂದ ಕುಡಿದ ಮತ್ತಿನಲ್ಲಿ ಬಂದ ಪ್ರದೀಪ್ ಅವನ ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ.
ಗಲಾಟೆ ವಿಕೋಪಕ್ಕೆ ತಿರುಗಿದಾಗ ಸಿಗರೇಟ್‌ನಿಂದ ಮರ್ಮಾಂಗ ಸುಟ್ಟು ದೊಣ್ಣೆ ಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕಿರುಚಾಡುವ ಶಬ್ದ ಕೇಳಿಸದಂತೆ ಟಿವಿ ಸೌಂಡ್ ಜಾಸ್ತಿ ಇಟ್ಟು ಕೊಲೆ ಮಾಡಲಾಗಿದೆ.
ಟಿವಿ ಸೌಂಡ್ ಜಾಸ್ತಿ ಆದ ಹಿನ್ನೆಲೆಯಲ್ಲಿ, ಮನೆಯ ಮಾಲೀಕರು ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆಯ ಬಳಿಕ ತನ್ನ ಕಾರಿನಲ್ಲಿ ಚೇತನ್ ಪರಾರಿಯಾಗುತ್ತಿದ್ದ.ಟವರ್ ಲೊಕೇಶನ್ ಆಧಾರದ ಮೇಲೆ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಬಂಧಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಘಟನೆ ಸಂಬಂಧ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದು, ಸಲಿಂಗಕಾಮಕ್ಕೆ ಸ್ನೇಹಿತನನ್ನು ಹತ್ಯೆ ಮಾಡಿರಬಹುದು ಎಂಬ ಶಂಕೆಯಲ್ಲಿ ಶಂಕಿಸಿದ್ದಾರೆ.
