ಉದಯವಾಹಿನಿ , ಮೈಸೂರು:ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನ ಶಂಕರಮಠದಲ್ಲಿ ಹನುಮಜಯಂತಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಬಳಿಕ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಕುರಿತು ಪ್ರತಿಕ್ರಯಿಸಿದರು. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಅಂಬೇಡ್ಕರ್ ಅವರ ಕೈ ಕೆಳಗೆ ಕೆಲಸ ಮಾಡುವ ಒಬ್ಬರನ್ನು ಅವರ ವಿರುದ್ಧ ಚುನಾವಣೆಗೆ ನಿಲ್ಲಿಸಿ ಸೋಲಿಸಿತು. ಈಗ ಯಾವ ಮುಖ ಇಟ್ಟುಕೊಂಡು ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ಮಾತನಾಡುತ್ತೆ? ಅಂಬೇಡ್ಕರ್ ತೀರಿ ಹೋದಾಗ ದಿಲ್ಲಿಯಲ್ಲಿ ಒಂದಿಷ್ಟು ಜಾಗ ಕೊಡಲಿಲ್ಲ ಅದೇ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿಗೆ ಎಕರೆ ಗಟ್ಟಲೆ ಜಾಗ ಕೊಟ್ಟರು ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡಿದ್ದು ಆಯ್ತು ಈಗ ದಲಿತ ಸಮುದಾಯದ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ಬಿಜೆಪಿ ಬೆಂಬಲಿತ ಸರ್ಕಾರ ಇದನ್ನು ಯಾರೂ ಮರೆತಿಲ್ಲ. ಅದೇ ಕಾಂಗ್ರೆಸ್ ತಮ್ಮ ಕುಟುಂಬದವರಿಗೆ ಅವರೇ ಭಾರತ ರತ್ನ ಕೊಟ್ಟುಕೊಂಡರು. ಅಂಬೇಡ್ಕರ್ ಓಡಾಡಿದ ಜಾಗವನ್ನು ಪಂಚಪೀಠ ಮಾಡಿದ್ದು ಬಿಜೆಪಿ ಸರ್ಕಾರ ಎಂದರು.
