ಉದಯವಾಹಿನಿ , ಮಂಡ್ಯ: ಕಳೆದೆರಡು ದಿನಗಳಿಂದ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಇಂದು ಅಂತಿಮ ತೆರೆ ಬೀಳಲಿದ್ದು 2025ರ 88 ನೇ ಸಾಹಿತ್ಯ ಸಮೇಳನ ಗಡಿ ಜಿಲ್ಲೆ ಬಳ್ಳಾರಿಯಲ್ಲಿ ನಡೆಯಲಿದೆ.
ಲಕ್ಷಾಂತರ ಮಂದಿ ಸಮೇಳನಕ್ಕೆ ಆಗಮಿಸಿ ಪುಸ್ತಕ ಮೇಳ, ವಿವಿಧ ಗೊಷ್ಟಿ, ವಸ್ತುಪ್ರದರ್ಶನ, ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಗಳನ್ನು ವಿಕ್ಷಿಸಿ ಸಾಹಿತ್ಯ ಹಬ್ಬವನ್ನು ಹಿಮಡಿಗೊಳುಸುದ್ದಾರೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮಿಜಿಯವರ ದಿವ್ಯಸಾನಿಧ್ಯದಲ್ಲಿ ಇಂದು ಸಂಜೆ ನಡೆಯಲಿರುವ ಅದ್ದೂರಿ ವೇದಿಕೆ ಕಾರ್ಯಕ್ರಮದ ಮೂಲಕ ಅಕ್ಷರ ಜಾತ್ರಗೆ ತೆರೆಬೀಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್‌, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ಮುಂದಿನ 88 ನೇ ಸಾಹಿತ್ಯ ಸಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ್‌ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನು ಮತದಿಂದ ಬಳ್ಳಾರಿಯಲ್ಲಿ ನಡೆಸಲು ತಿರ್ಮಾನಿಸಲಾಗಿದೆ.

ಬಳ್ಳಾರಿ, ಕೋಲಾರ, ಯಾದಗಿರಿ, ಚಿಕ್ಕಮಗಳೂರು ಸೇರಿದಂತೆ ನೂತನ ಜಿಲ್ಲೆಗಳಿಂದಲೂ 88 ನೇ ಸಮೆಳನ ನಡೆಸಲು ಮನವಿ ಬಂದಿದ್ದವು. ಆದರೆ ಭಾಷಾ ಪ್ರೇಮವನ್ನು ಜಾಗೃತಗೊಳಿಸುವ ದೃಷಿಯಿಂದ ಗಡಿ ನಾಡು ಬಳ್ಳಾರಿಯಲ್ಲಿ ಸಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮೀತಿಯ ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನಿಸಲಾಗಿದೆ.

1926 ಹಾಗೂ 1938 ರಲ್ಲಿ ಬಳ್ಳಾರಿಯಲ್ಲಿ ಸಮೇಳನ ನಡೆದಿತ್ತು, ಸ್ವಾತಂತ್ರ್ಯ ನಂತರ 1958 ರಲ್ಲಿ ವಿ.ಕೃ.ಗೋಕಾಕ್‌ ಅವರ ಆಧ್ಯಕ್ಷತೆಯಲ್ಲಿ ಸಮೇಳನ ನಡೆದಿತ್ತು, ಇದೀಗ 66 ವರ್ಷಗಳ ಬಳಿಕ ಮತ್ತೆ ಗಡಿ ನಾಡಿಗೆ ಅಕ್ಷರ ತೇರು ಎಳೆಯುವ ಭಾಗ್ಯ ದೊರೆತಿದೆ.ಕೊನೆ ದಿನ ಹಾಗೂ ಭಾನುವಾರವಾದ್ದರಿಂದ ಇಂದು ಅಕ್ಷರ ಜಾತ್ರೆಗೆ ಜನ ಸಾಗರವೇ ಹರಿದು ಬಂದಿತ್ತು. ಬೆಂಗಳೂರು, ತುಮಕೂರು, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕನ್ನಢಾಭಿಮಾನಿಗಳು ಆಗಮಿಸಿದ್ದರು.
ಕಳೆದೆರಡು ದಿನಗಳಿಂದ ಅದ್ದೂರಿಯಾಗಿ ಸಮೇಳ ನಡೆದಿದ್ದು, ಸಾಹಿತ್ಯಾಸಕ್ತರಿಗೆ ಉತ್ತಮ ಆತಿಥ್ಯ ನೀಡಲಾಗಿದೆ. ಇಂದು ಸಮೇಳನಕ್ಕೆ ಅದ್ದೂರಿ ತೆರೆಬೀಳಲಿದ್ದು, ಕನ್ನಡ ಕಟ್ಟಲು ರಾಜ್ಯಸರ್ಕಾರ ಹಾಗೂ ನಾಗರಿಕರ ಪಾತ್ರ ಏನೆಂಬುದನ್ನು ಕುರಿತು ಬಹುಮುಖ್ಯವಾಗಿ ಸಮೇಳನದ ನಿರ್ಣಯಗಳ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

Leave a Reply

Your email address will not be published. Required fields are marked *

error: Content is protected !!