ಉದಯವಾಹಿನಿ , ದೆಹಲಿ : ಚುನಾವಣಾ ಪ್ರಚಾರ ಬಿಟ್ಟು ಹದಗೆಟ್ಟಿರುವ ನಗರದ ಸಮಸ್ಯೆಗಳನ್ನು ಪರಿಹರಿಸುವಂತೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೆನಾ ಅವರು ಸಿಎಂ ಅತಿಶಿ ಹಾಘೂ ಎಎಪಿ ನಾಯಕ ಕೇಜ್ರಿವಾಲ್‌ಗೆ ಸಲಹೆ ನೀಡಿದ್ದಾರೆ.
ಆಮ್‌ ಆದಿ ಪಕ್ಷದ (ಎಎಪಿ) ವಿಧಾನಸಭೆ ಚುನಾವಣೆಯ ಪ್ರಚಾರದ ನಡುವೆ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅವರು ಇಂದು ದಿಲ್ಲಿಯ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ನರಕಸದಶ ಜೀವನದತ್ತ ಬೊಟ್ಟು ಮಾಡಿದರು.
ತೆರೆದ ಚರಂಡಿಗಳ ದಶ್ಯಗಳನ್ನು ಮತ್ತು ಅಪಾರ ಪ್ರಮಾಣದ ವಿದ್ಯುತ್‌ ಬಿಲ್‌ಗಳ ಬಗ್ಗೆ ನಿವಾಸಿಗಳು ದೂರುತ್ತಿರುವ ದಶ್ಯಗಳನ್ನು ಹಂಚಿಕೊಂಡ ಸಕ್ಸೇನಾ, ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್‌ ಮತ್ತು ಮುಖ್ಯಮಂತ್ರಿ ಅತಿಶಿ ಈ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಗಲ್ಲಿಗಳು ಮತ್ತು ಬೀದಿಗಳಲ್ಲಿ ಸಂಗ್ರಹವಾಗಿರುವ ದುರ್ವಾಸನೆಯ ನೀರು ಮಳೆನೀರಲ್ಲ, ಆದರೆ ತುಂಬಿ ಹರಿಯುವ ಚರಂಡಿಗಳಿಂದ ಬಂದಿದೆ. ಮಹಿಳೆಯರು ತಮ ಸಮಸ್ಯೆಗಳನ್ನು ಹೇಳುತ್ತಿರುವುದು ದೆಹಲಿಯವರೇ ಹೊರತು ಬೇರೆ ಯಾವುದೇ ರಾಜ್ಯದವರಲ್ಲ ಎಂದು ದಕ್ಷಿಣ ದೆಹಲಿಯ ರಂಗಪುರಿ ಪಹಾರಿಗೆ ಭೇಟಿ ನೀಡಿದ ನಂತರ ಲೆಫ್ಟಿನೆಂಟ್‌ ಗವರ್ನರ್‌ ಎಕ್‌್ಸನಲ್ಲಿ ಪೋಸ್ಟ್‌‍ ಮಾಡಿದ್ದಾರೆ.

ಈ ಪ್ರದೇಶದ ನಿವಾಸಿಗಳು ಅಸಮರ್ಪಕ ವಿದ್ಯುತ್‌ ಸರಬರಾಜು, ಅನಿಯಮಿತ ನೀರು ಸರಬರಾಜು ಮತ್ತು ಕಳಪೆ ಕಸ ವಿಲೇವಾರಿ ಬಗ್ಗೆ ದೂರಿದ್ದಾರೆ. ಅನೇಕ ನಿವಾಸಿಗಳು ಪ್ರತಿದಿನ 8-10 ಗಂಟೆಗಳ ವಿದ್ಯುತ್‌ ಕಡಿತದ ಬಗ್ಗೆ ದೂರು ನೀಡಿದ್ದಾರೆ ಮತ್ತು ಉಚಿತ ವಿದ್ಯುತ್‌ ನೀಡುವುದಾಗಿ ದೆಹಲಿ ಸರ್ಕಾರದ ಹೇಳಿಕೆಗಳ ಹೊರತಾಗಿಯೂ ಹೆಚ್ಚಿನ ವಿದ್ಯುತ್‌ ಬಿಲ್‌ಗಳನ್ನು ತೋರಿಸಿದ್ದಾರೆ ಎಂದು ಲೆಫ್ಟಿನೆಂಟ್‌ ಗವರ್ನರ್‌ ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!