ಉದಯವಾಹಿನಿ, ಕಮಲನಗರ: ತಾಲೂಕಿನ ಸೋನಾಳ ಶ್ರೀ ವಿರಕ್ತಮಠದ ಲಿಂ ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯ ಸ್ಮರಣೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವು ಭವ್ಯ ಮತ್ತು ದಿವ್ಯವಾಗಿ ನಡೆಯಿತು. 21ನೇ ಡಿಸೆಂಬರ್ ತಿಂಗಳು ಶನಿವಾರದಂದು ಸಾಯಂಕಾಲ ನಾಲ್ಕು ಗಂಟೆಗೆ ವಿರಕ್ತಮಠದ ಸಾವಿರಾರು ಜನ ಸಮೂಹ ಮಧ್ಯದಲ್ಲಿ ಮಹಾಮಂಗಲ ಕಾರ್ಯಕ್ರಮವು ವೈಭವದಿಂದ ನೇರವೇರಿತು.
ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯಸ್ಮರಣೋತ್ಸವ ನಿಮಿತ್ಯ 15 ಜನ ಪರಮ ಪೂಜ್ಯರ ಪಾದ ಪೂಜೆ ಸಲ್ಲಿಸಿ ಪೂಜ್ಯರ ಪಾವನ ಹಸ್ತದಿಂದ ನೂತನ ರಥವನ್ನು ಲೋಕಾರ್ಪಣೆಗೊಳಿಸಿ ವಿವಿಧ ವೈಭವಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು.
ಮೆರವಣಿಗೆ ಉದ್ದಕ್ಕೂ ನೂರಾರು ಜನ ಭಕ್ತರ ಮಧ್ಯ ಸುಮಂಗಲಿಯರು ಕುಂಭ ಮೇಳ,ಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಕಣ್ಮನ ಸೆಳೆದರು.ಭಜಂತ್ರಿ ಡೋಳು ಕುಣಿತದಿಂದ ಇಡಿ ಗ್ರಾಮವೇ ಉತ್ಸವ ಉಲ್ಲಾಸದಿಂದ ಕುಣಿದು ಕುಪ್ಪಳಿಸಿದರು.ಹನುಮಾನ ಮಂದಿರದಿಂದ ಪ್ರಾರಂಭಗೊಂಡ ರಥ ಮೆರವಣಿಗೆ ನಿರಂಜನ ವೃತ್ತದವರೆಗೆ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಬಂದು ತಲುಪಿತು.
ಇಂಥ ಅಪರೂಪದ ಗಡಿ ಭಾಗದಲ್ಲಿ ಎಲ್ಲಿಯು ಇಲ್ಲದ ವೈಭವದ ರಥವು ನೋಡಲು ಈ ಸುತ್ತಲಿನ ನಾಡಿನ ಭಕ್ತರಾದ ಸೋನಾಳ ,ಲಖನಗಾಂವ, ಚಂದನವಾಡಿ,ಹೊರಂಡಿ,ಖೇಡ, ಚಾಡೇಶ್ವರ, ಡಿಗ್ಗಿ, ಕಮಲನಗರ ,ಬಾಲೂರ, ಹೊಳಸಮುದ್ರ,ಸಂಗಮ,ಹುಲಸುರ, ಉದಗೀರ,ಮದನೂರ, ಹೂವಿನ ಶಿಗ್ಲಿ, ನಾಗುರ, ಮುಂತಾದ ಕಡೆಗಳಿಂದ ಭಕ್ತರು ಪಾಲ್ಗೊಂಡಿದರು.

Leave a Reply

Your email address will not be published. Required fields are marked *

error: Content is protected !!