ಉದಯವಾಹಿನಿ, ಕಲಬುರಗಿ : ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ದೊಡ್ಡ ಸಂಚಲನ ಸೃಷ್ಟಿಸಿದೆ. ಘಟನೆ ಖಂಡಿಸಿ ಕಲಬುರಗಿ ಬಂದ್ ಆಗಿದ್ದು, ದೊಡ್ಡ ಪ್ರೊಟೆಸ್ಟ್ ನಡೆದಿದೆ. ಹಾಗೆಯೇ ಕೆಲವೆಡೆ ಕಲ್ಲು ತೂರಾಟ ನಡೆದಿರುವ ಬಗ್ಗೆ ವರದಿಯಾಗಿದೆ. ಪ್ರತಿಭಟನಾಕಾರರಿಂದ ಕಲಬುರಗಿಯಲ್ಲಿ ಲಾರಿಗಳ ಮೇಲೆ ಕಲ್ಲು ತೂರಾಟವಾಗಿದೆ.
ರಿಂಗ್ ರಸ್ತೆಯ ಸುಲ್ತಾನ್ ಪುರ ಬಳಿ ಅವಘಡ ನಡೆದಿದ್ದು,ದಲಿತಪರ ಸಂಘಟನೆಗಳು ರೊಚ್ಚಿಗೆದ್ದು ವಿವಿಧ ಘೋಷಣೆಗಳನ್ನ ಕೂಗಿದೆ. ಮತ್ತೊಂದೆಡೆ, ಶಹಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆದಿದ್ದು, ದೊಣ್ಣೆ ಲಾಠಿ ಹಿಡಿದು ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ.ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಯಾವುದೇ ಹಿಂಸಾಚಾರ ಆಗದಂತೆ ಕಠಿಣ ಕ್ರಮ ಜರುಗಿಸಲಾಗಿದೆ.
