ಉದಯವಾಹಿನಿ, ಹಾನಗಲ್‌: ಹರಿಹರ ತಾಲ್ಲೂಕು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರುವರಿ 8 ಮತ್ತು 9 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರೆಯ ಕುರಿತು ಶನಿವಾರ ಪಟ್ಟಣದಲ್ಲಿ ಪೂರ್ವಬಾವಿ ಸಭೆ ನಡೆಯಿತು.
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಿದರು. ಮಹಾರಥೋತ್ಸವ ಮತ್ತು ಜಾತ್ರೆಯ ಯಶಸ್ಸಿಗೆ ಸದ್ಭಕ್ತರು ಸಹಕಾರ ನೀಡಬೇಕು ಎಂದರು. ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪರಶುರಾಮ ಮುನಿಯಣ್ಣನವರ ಉಪಾಧ್ಯಕ್ಷರಾದ ರಾಮಣ್ಯ ಮತ್ತೂರ, ರವಿ ಲಕ್ಷಾಪೂರ, ಪುಟ್ಟಪ್ಪ ನರೇಗಲ್, ಶಿವಾನಂದ ಕನ್ನಕ್ಕನವರ, ಕಾರ್ಯದರ್ಶಿ ಸತೀಶ ಅಂಕೋಲ, ಬಸಣ್ಣ ಡುಮ್ಮನವರ ಮತ್ತು ಪ್ರಮುಖರಾದ ಪ್ರಕಾಶ ಯಳ್ಳೂರ, ಪ್ರಕಾಶ ನಂದಿಕೊಪ್ಪ, ಶಿವಣ್ಣ ಅರಳೇಶ್ವರ, ಶಿವಣ್ಣ ಮಾಸನಕಟ್ಟಿ, ಮಹೇಂದ್ರ ಬೆಳಗಲಿ, ಶಿವು ತಳವಾರ, ವಸಂತ ವಾಸನದ, ಸುಭಾಸ ಮಾವಕೊಪ್ಪ ಇದ್ದರು.

Leave a Reply

Your email address will not be published. Required fields are marked *

error: Content is protected !!