ಉದಯವಾಹಿನಿ, ರಾಣೆಬೆನ್ನೂರು: ಗ್ರಾಮೀಣ ಭಾಗದಲ್ಲಿರುವ ರಸ್ತೆಗಳು ಕೆಸರು ಗದ್ದೆಗಳಂತಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರಸ್ತೆಗಳು ಮತ್ತಷ್ಟು ಹಾಳಾಗಿ ಹೋಗಿವೆ. ಮಾಡುವಂತೆ ಹಲವು ಬಾರಿ ಕೇಳಿಕೊಂಡರೂ ಜನರ ಕೂಗಿಗೆ ಸ್ಪಂದನೆ ಗ್ರಾಮೀಣ ಭಾಗದ ರಸ್ತೆಗಳು ತೆಗ್ಗುಗುಂಡಿಗಳಿಂದ ಕೂಡಿವೆ. ಕಳೆದ ತಿಂಗಳು ಸತತವಾಗಿ ಸುರಿದ ಬಾರಿ ಮಳೆಗೆ ಹೆಚ್ಚಿನ ಕಡೆ ನೀರು ನಿಂತಿದ್ದರಿಂದ ದೊಡ್ಡ ಹೊಂಡಗಳಾಗಿದ್ದರೆ, ಮಳೆ ರಭಸಕ್ಕೆ ಕಲ್ಲುಗಳು ಕಿತ್ತು ರಸ್ತೆ ಕೊರತ ಉಂಟಾಗಿವೆ. ಮಳೆಗಾಲದಲ್ಲಿ ರಸ್ತೆಯ ಮೇಲಿನ ನೀರು ಹೊಲ ಗದ್ದೆಗಳಿಗೆ ನುಗ್ಗುತ್ತದೆ.
ಇದರಿಂದ ಬೆಳೆಗಳು ತೇವಾಂಶ ಹೆಚ್ಚಾಗಿ ಬೆಳೆ ಹಾನಿಗೊಳ್ಳುತ್ತವೆ. ರಸ್ತೆಯ ಎರಡೂ ಬದಿಗೆ ನೀರು ಸರಾಗವಾಗಿ ಹರಿದು ಹೊಗುವಂತೆ ಮಾಡಬೇಕು. ರಾತ್ರಿ ಹೊತ್ತು ಬೈಕ್‌ಗಳ ಮೇಲೆ ಜಮೀನುಗಳಿಗೆ ಅಡಿಕೆ, ಕಬ್ಬು, ತೆಂಗು ಮುಂತಾದ ಬೆಳೆಗಳಿಗೆ ನೀರು ಕಟ್ಟಲು ಹೋಗುವಾಗ ಗುಂಡಿಗಳಲ್ಲಿ ಬಿದ್ದು ಕೈಕಾಲುಗಳಿಗೆ ಪೆಟ್ನಾದ ಘಟನೆ ನಡೆದಿವೆ.
