ಉದಯವಾಹಿನಿ, ನವದೆಹಲಿ: ಸಾಮಾನ್ಯವಾಗಿ ನಾವು ನೋಡಿರುವಂತೆ ಜನರು ತಾವು ಇಷ್ಟಪಟ್ಟಿರುವುದನ್ನು ಪಡೆಯಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ಘಟನೆಗಳು ನಡೆದಿವೆ. ಆದರೆ, ಹುಡುಗನ ವಿಚಾರವಾಗಿ ಹುಡುಗಿಯರು ಕಿತ್ತಾಡಿಕೊಳ್ಳುತ್ತಿರುವ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದೆ. ಸದ್ಯ ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಹುಡುಗಿಯರ ಗುಂಪೊಂದು ಕಿತ್ತಾಡಿಕೊಂಡಿದ್ದು, ಬೆಲ್ಟ್ ಸೇರಿದಂತೆ ಇತರ ವಸ್ತುಗಳಿಂದ ಮನಸೋಇಚ್ಛೆ ಥಳಿಸಿದ್ದಾರೆ ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಆದರೆ, ಹುಡುಗಿಯರು ಕಿತ್ತಾಡಿಕೊಳ್ಳುವಾಗ ಅಲ್ಲಿದ್ದ ಹುಡುಗರು ಖುಷಿಯಲ್ಲಿ ಕುಣಿದಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ: ಹಂಚಿಕೊಳ್ಳಲಾಗಿದ್ದು, 1.75 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಅಉಮ್ಮನೆ ನೋಡುವ ಬದಲು ಜಗಳವನ್ನು ಬಿಡಿಸಬಹುದಿತ್ತಲ್ಲಾ ಎಂದು ಕಮೆಂಟ್ ಮಾಡಿದರೆ ಮತ್ತಷ್ಟು ಜನ ನೋಡಲು ಫನ್ನಿಯಾಗಿದೆ ಎಂದು ಕಮೆಂಟ್ ಹಾಕಿದ್ದಾರೆ. ಕೆಲವರು ಹುಡುಗರು ಕುಣಿಯುತ್ತಿರುವುದನ್ನು ನೋಡಿ ಹುಡುಗರೇ ಅವರನ್ನು ಜಗಳಕ್ಕೆ ಹುರಿದುಂಬಿಸುವಂತಿದೆ ಎಂದು ಕಮೆಂಟ್ ಮಾಡಿದ್ದಾರೆ.
