ಉದಯವಾಹಿನಿ, ಬೆಂಗಳೂರು: ಬಸವನಗುಡಿಯ ವಾಸವಿ ಕನ್ವೆನ್ಷನ್ ಸೆಂಟರ್ ನಲ್ಲಿ ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ನಿಂದ ವಿಶ್ವಶಾಂತಿ ಮತ್ತು ಮನುಕುಲದ ಒಳಿತಿಗಾಗಿ “ಭಗವಾನ್ ವಿಷ್ಣುವಿನ ದಶಾವತಾರ, ಏಳೂರ್ಡು ಅಧಿನಾರಾಯಣ, ಲಕ್ಷ್ಮೀ ನಾರಾಯಣ, ವೆಂಕಟೇಶ್ವರ, ಶ್ರೀ ದೇವಿ, ಭೂದೇವಿ, ಹನುಮಂತ, ಗರುಡ, ಹೂವಿನ ಅಲಂಕಾರ ಮತ್ತು ಸುತ್ತಲೂ ಹೂವುಗಳ ಮೇಲೆ ಆದಿಶೇಷನನ್ನು ರಚಿಸಿ ಪೂಜಿಸಲಾಯಿತು. ಎರಡು ದಿನ ನಡೆದ ಈ ಧಾರ್ಮಿಕ ಮಹೋತ್ಸವದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ, ಸೀತಾ ರಾಮ ಕಲ್ಯಾಣ ಮತ್ತು ಆದಿ ನಾರಾಯಣ ಕಲ್ಯಾಣವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಲಕ್ಷ್ಮೀ ಆದಿನಾರಾಯಣ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ೧೦ ವರ್ಷಗಳಲ್ಲಿ ಇದು ನಾಲ್ಕನೇ ವೈಭವದ ಧಾರ್ಮಿಕ ಮಹೋತ್ಸವವಾಗಿದೆ. ಭಾರತದಲ್ಲಿ ಒಟ್ಟು ೧೦೭ ದಿವ್ಯ ದರ್ಶನಗಳಿದ್ದು, ಇದು ೧೦೮ ನೇ ವೈಕುಂಠ ದರ್ಶನವಾಗಿದೆ ಎಂದರು. ಟ್ರಸ್ಟ್ ಅಧ್ಯಕ್ಷ ಎನ್ ಎಸ್ ನಾಗರಾಜ್, ಉಪಾಧ್ಯಕ್ಷ ಕೆ.ಆರ್. ಚಂದ್ರಶೇಖರ್ ಖಜಾಂಚಿ ರಾಘವೇಂದ್ರ, ಯುವ ಮುಖಂಡರಾದ ಅನಿಲ್ ಕುಮಾರ್, ಅಭಿಲಾಷ್, ಸಿಎ ಕಿರಣ್, ಅರ್ಜುನ್, ಪ್ರಸನ್ನ ಮತ್ತಿತರರು ಮಹೋತ್ಸವದ ಉಸ್ತುವಾರಿ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!