ಉದಯವಾಹಿನಿ, ಬೆಂಗಳೂರು: ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ೧೦೦೮ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಅಮೃತ ಹಸ್ತ ಪೂಜೆಯನ್ನು ನಡೆವೆರೆಸಿ ಭಕ್ತರಿಗೆ ಫಲಮಂತ್ರಾಂಶತೆ ಕೊಟ್ಟು ಅನುಗ್ರಹಿಸಿದರು.
ವಿಶೇಷವಾಗಿ ಜಯನಗರ ಶಾಸಕರಾದ ಸಿ.ಕೆ.ರಾಮಮೂರ್ತಿ, ಬಸವನಗುಡಿ ಶಾಸಕರಾದ ರವಿ ಸುಬ್ರಮಣ್ಯ ಹಾಗೂ ಹಿಂದೂ ನಾಯಕರು ಮತ್ತು ಹೋರಾಟಗಾರರಾದ ತೇಜಸ್ ಗೌಡರವರು ಭೇಟಿಯಾಗಿ, ಗುರುಗಳ ಆಶೀರ್ವಾದವನ್ನು ಪಡೆದಿದ್ದಾರೆ. ಲಕ್ಷ್ಮೀನಾರಾಯಣ ರವರು ಶ್ರೀಗಳಿಂದ ಫಲಮಂತ್ರಾಂಶತೆ ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ಮತ್ತು ನಂದಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು.
