ಉದಯವಾಹಿನಿ, ಬಸವನಬಾಗೇವಾಡಿ : ತಾಲೂಕಿನ ಮನಗೂಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಆರೋಪದ ಮೇಲೆ ಪ್ರಾಂಶುಪಾಲ ಸಚಿನ್ ಕುಮಾರ್ ಪಾಟೀಲ್ ಎಂಬುವರನ್ನು ಪೆÇಲೀಸರುಬಂಧಿಸಿದ್ದಾರೆ.
ಆರೋಪಿಯು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿ ಕೊಠಡಿಗೆ ಕರೆಯುವದು,ಪ್ರೀತಿಸುವಂತೆ ಒತ್ತಾಯಿಸುವುದು ಸೇರಿ ಹಲವು ರೀತಿ ಕಿರುಕುಳ ಕೊಡುತ್ತಿದ್ದರು ಎಂಬ ದೂರು ಬಂದ ಕಾರಣ ಬಂಧಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
