ಉದಯವಾಹಿನಿ, ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನನಗೆ ಅವಕಾಶ ಕೊಡದಿದ್ದರೆ ನಾನು ಈ ಸ್ಥಾನಕ್ಕೇರುತ್ತಿರಲಿಲ್ಲ.ದರ್ಶನ್ ಅವರು ನನ್ನ ಇಂಡಸ್ಟ್ರಿಯ ಗುರುಗಳು ಎಂದು ನಟಿ ರಚಿತಾ ರಾಮ್ ಹೇಳಿದ್ದಾರೆ.
ಅವರು ಚಾನ್ಸ್ ಕೊಡಲಿಲ್ಲ ಅಂದ್ರೆ ನಾನು ಈಗ ಎಲ್ಲೋ ಇರುತ್ತಿದ್ದೆ. ಮದುವೆಯಾಗಿ ಮಕ್ಕಳಾಗಿ ನಾನು ಎಲ್ಲೋ ಇರುತ್ತಿದ್ದೆ.ದರ್ಶನ್ ಅವರಿಗಾಗಿ ವಿಜಯಲಕ್ಷ್ಮಿ ಸಾಕಷ್ಟು ಯುದ್ಧ ಮಾಡಿದ್ದಾರೆ.ಸುಮ್ಮನೆ ಯಾರಿಗೂ ಬೇಲ್ ಸಿಗುವುದಿಲ್ಲ ನಟ ದರ್ಶನ್ ಅವರಿಗೆ ಬೇಲ್ ಸಿಕ್ಕಿದೆ. ಕಾನೂನಿದೆ ಸದ್ಯದಲ್ಲೇ ಎಲ್ಲರಿಗೂ ಸತ್ಯ ಗೊತ್ತಾಗುತ್ತದೆ ಎಂದು ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ತಿಳಿಸಿದ್ದಾರೆ.
ದರ್ಶನ ಅವರು ಬೇಲ್ ಪಡೆದು ಬಿಡುಗಡೆಯಾದ ಬಳಿಕ ಯಾಕೆ ಭೇಟಿ ಆಗಿಲ್ಲ ಎಂದು ಮಾಧ್ಯಮಗಳು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದರ್ಶನ್ ಅವರನ್ನು ಯಾಕೆ ಭೇಟಿಯಾಗಲಿಲ್ಲ ಅಂದ್ರೆ, ಈಗ ಅವರ ವೈಯಕ್ತಿಕ ಸಮಯ.ಹಾಗಾಗಿ ಅವರಿಗೆ ವೈಯಕ್ತಿಕವಾಗಿ ಸಮಯದ ಅಗತ್ಯವಿದೆ. ಅವರು ತಮ್ಮ ಕುಟುಂಬದೊಂದಿಗೆ ಸ್ವಲ್ಪ ಕಾಲ ಕಳೆಯಲಿ. ನೋಡೋಣ ನಮಗೂ ಒಂದು ಟೈಮ್ ಬರುತ್ತೆ. ಅವರು ಸದ್ಯ ತಮ್ಮ ಸಮಯವನ್ನು ಸ್ಪೆಂಡ್ ಮಾಡಲಿ ಎಂದು ರಚಿತಾ ರಾಮ್ ಹೇಳಿದ್ದಾರೆ.
ನಾನು ಸುಮ್ಮನೆ ದರ್ಶನ್ ಅವರ ಹೆಸರಲ್ಲಿ ಪಬ್ಲಿಸಿಟಿ ತೆಗೆದುಕೊಳ್ಳುವ ಅವಶ್ಯತೆ ಇಲ್ಲ. ಅವರ ಬಗ್ಗೆ ಹಾಗೂ ಬ್ಯಾನರ್ ಬಗ್ಗೆ ಮಾತನಾಡಲು ನನಗೆ ಅಧಿಕಾರ ಖಂಡಿತಾ ಇದೆ. ನನ್ನ ತಂದೆ ತಾಯಿ ಬಗ್ಗೆ ಮಾತನಾಡೋಕೆ ನಾನೇಕೆ ಅನುಮತಿ ಪಡೆಯಬೇಕು? ದರ್ಶನ್ ಸರ್ ಆಗಿರಬಹುದು, ತೂಗುದೀಪ ಬ್ಯಾನರ್ ಬಗ್ಗೆ ಆಗಿರಬಹುದು ನನ್ನ ಉಸಿರಿರುವ ತನಕ ನನಗೆ ಮಾತನಾಡಲು ಅಧಿಕಾರವಿದೆ ಎಂದು ರಚಿತಾ ಹೇಳಿಕೊಂಡಿದ್ದಾರೆ.
