ಉದಯವಾಹಿನಿ, ಸಂಡೂರು : ತಾಲೂಕಿನ ಸುಶೀಲಾನಗರ, ಸಿದ್ದಾಪುರ ಮಧ್ಯದಲ್ಲಿ ಡಿಸೆಂಬರ್ 29 ರಂದು ಲಾರಿ ಮತ್ತು ಬೈಕ್ ಡಿಕ್ಕಿ ಸಂಬಂವಿಸಿ ಮೃತ ಪಟ್ಟಿದ್ದ ಇರ್ವರಿಗೆ ರೈತ ಸಂಘದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ರೈತ ಸಂಘದವರು ಅರ್ಧಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಅಲ್ಲಿ ಸಂಚರಿಸುತ್ತಿದ್ದ ಲಾರಿ ಚಾಲಕರಿಗೆ ಸುರಕ್ಷಿತ ಚಾಲನೆ ಕುರಿತು ಜಾಗೃತಿ ಮೂಡಿಸಿದರು. ಸಭೆಯಲ್ಲಿ ರೈತ ಸಂಘದ ಗ್ರಾಮ ಘಟಕದ ಗೌರವ ಅಧ್ಯಕ್ಷ ಪಿ.ಸಿ. ಪರಮೇಶ್ವರ ಅಧ್ಯಕ್ಷ ಪಿ.ಮಂಜುನಾಥ ಪಾಟೀಲ್, ಪ್ರಧಾನ ಕಾರ್ಯದರ್ಶಿ ಹೆಚ್. ಕಾಡಪ್ಪ, ಉಪಾಧ್ಯಕ್ಷ ಜಿ.ಪರಮೇಶ್ವರ ಕಾರ್ಯದರ್ಶಿ ಎನ್. ಪಂಪಾಪತಿ, ಲಾರಿ ಮಾಲೀಕರ ಸಂಘದ ಆಧ್ಯಕ್ಷ ಟಿ. ತಿಪ್ಪೇಸ್ವಾಮಿ, ನರಸಿಂಗಾಪುರ ಗ್ರಾಮ ಘಟಕದ ಅಧ್ಯಕ್ಷ ನೀಲಕಂಠಪ್ಪ ಮುಖಂಡರು ಜಿ. ಕುಮಾರಸ್ವಾಮಿ, ಟಿ.ಮರಿಯಮ್ಮ, ಬಿ. ಮಾಂತಮ್ಮ, ಸಿದ್ದಲಿಂಗಪ್ಪ ಟಿ.ಎಸ. ಪ್ರಭಾಕರ ಮತ್ತಿತ್ತರು ಉಪಸ್ಥಿತರಿದ್ದರು.
