ಉದಯವಾಹಿನಿ, ಕೋಲಾರ : ರೇಷ್ಮೆ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಚಳಿಗಾಲ ಮತ್ತು ಮಳೆಗಾಲಗಳಲ್ಲಿ ಸುಣ್ಣಕಟ್ಟು ರೋಗ ಕಂಡುಬರುತ್ತದೆ. ಚಾಕಿ ಹುಳುಗಳು ಆಸ್ಪರಜಿಲ್ಲಸ್ ರೋಗಕ್ಕೆ ತುತ್ತಾಗುತ್ತವೆ. ಬುವೇರಿಯಾ ಬ್ಯಾಸಿಯಾನ ಎಂಬ ಶಿಲೀಂದ್ರ ಬಿಳಿ ಸುಣ್ಣಕಟ್ಟು ರೋಗಕ್ಕೆ ಕಾರಣ. ಆಸ್ಪರ್‌ಜಿಲ್ಲಸ್ ಪ್ಲವಸ್, ಆ,ಒರೈಜೆ, ಆ.ಟಮೇರಿ ಆಸ್ಪರ್‌ಜಿಲ್ಲಸ್ ರೋಗ ಬರಲು ಕಾರಣ. ಸೋಂಕಿನ ಮೂಲ: ಶಿಲೀಂದ್ರಗಳು ಈ ರೋಗ ಉಂಟು ಮಾಡುತ್ತವೆ. ಗಡುಸಾದ/ರೋಗಪೀಡಿತ ಹುಳು, ವಾತಾವರಣ, ಸಾಕಾಣಿಕೆ ಮನೆ, ಸಲಕರಣೆಗಳು ಮತ್ತು ಪರ್ಯಾಯ ಕೀಟಗಳು ಸೋಂಕು ಉಂಟು ಮಾಡುತ್ತವೆ ಎಂದು ಜಿಲ್ಲಾ ರೇಷ್ಮೆ ಉಪನಿರ್ದೇಶಕ ಎಸ್.ಎನ್. ಶ್ರೀನಿವಾಸ್ ತಿಳಿಸಿದ್ದಾರೆ.
ರೇಷ್ಮೆ ಬೆಳೆಗಾರರಿಗೆ ಅವರು ಮಾದ್ಯಮದವರಿಗೆ ಮಾಹಿತಿ ನೀಡಿ ಸುಣ್ಣಕಟ್ಟು ರೋಗಕ್ಕೆ ಕಾರಣ:- ಸುಣ್ಣಕಟ್ಟು ರೋಗಕ್ಕೆ ಕಡಿಮೆ ಉಷ್ಣಾಂಶ ಮತ್ತು ಅಧಿಕ ಶೈತ್ಯಾಂಶ ಕಾರಣ. ಆಸ್ಪರ್‌ಜಿಲ್ಲೋಸಿಸ್ ರೋಗಕ್ಕೆ ಅಧಿಕ ಉಷ್ಣಾಂಶ ಮತ್ತು ಅಧಿಕ ಶೈತ್ಯಾಂಶಕಾರಣ.ಈಗ ವಾತಾವರಣದಲ್ಲಿ ಶೈತ್ಯಾಂಶ ಹೆಚ್ಚಾಗುತ್ತಿದ್ದು, ರೇಷ್ಮೆ ಹುಳುಗಳಿಗೆ ಸುಣ್ಣಕಟ್ಟು ರೋಗವು ಬರುವ ಸಾಧ್ಯತೆ ಇರುವುದರಿಂದ ರೇಷ್ಮೆ ಹುಳು ಸಾಕಣೆಯಲ್ಲಿ ಮುಂಜಾಗ್ರತೆ ವಹಸಿ ಪ್ರಾರಂಭದಿಂದಲೇ ಅಗತ್ಯ ಕ್ರಮಗಳನ್ನು ಕೈಗೊಂಡಲ್ಲಿ ಈ ರೋಗವನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಬಹುದು ರೇಷ್ಮೆ ಬೆಳೆಗಾರರು ಅನುಸರಿಸಬೇಕಾದ ನಿಯಂತ್ರಣ ಕ್ರಮಗಳ ಹಲವು ಸಲಹೆಗಳನ್ನು ಅವರು ನೀಡಿದ್ದು, ಅದರಂತೆ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.
