ಉದಯವಾಹಿನಿ, ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ರಾತ್ರಿ ದೇವಿಗೆ ಶ್ರದ್ಧಾ ಭಕ್ತಿಯಿಂದ ರಂಗಪೂಜೆ ನೆರವೇರಿತು. ಕ್ಷೇತ್ರದ ಕೆಮ್ಮಿಂಜೆ ನಾಗೇಶ ತಂತ್ರಿ ದೇವಿಗೆ ರಂಗಪೂಜೆ ಸಮರ್ಪಿಸಿದರು. ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ ಇದ್ದರು. ದೇವರ ಬಲಿ ಹೊರಟು ಭೂತ ಬಲಿ ಉತ್ಸವ. ವಸಂತ ಕಟ್ಟೆ ಪೂಜೆ ನೆರವೇರಿತು. ಆಕರ್ಷಕ ಬೆಡಿ ಪ್ರದರ್ಶನ ನೆರವೇರಿತು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷೆ, ಶಾಸಕಿ ಭಾಗೀರಥಿ ಮುರುಳ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ವ್ಯವಸ್ಥಾಪನಾ ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ ಕೆ.ಪಜಿಂಬಿಲ, ನಾಗೇಶ್ ಆಳ್ಳ ಕಟ್ಟಬೀಡು, ಯೋಗಾನಂದ ಉಳ್ಳಲಾಡಿ, ಭಾಗ್ಯ ಪ್ರಸನ್ನ ಎಣ್ಣೂರು, ರಘುನಾಥ ಎಂಜೀರು, ವಾರಿಜಾಕ್ಷಿ ಕೇರ್ಪಡ, ಶಿವಾನಂದ ಬೊಳ್ಳಜೆ, ಅನೂಪ್ ಕುಮಾರ್ ಆತ್ಮ, ಸೀತಾರಾಮ ಗೌಡ ನಾಗನಕಜೆ, ಜಯಪ್ರಕಾಶ್ ಲೆಕ್ಕೇಸಿರಿಮಜಲು, ಸುಂದರ ಗೌಡ ಆರೆಂಬಿ ಮತ್ತಿತರರು ಭಾಗವಹಿಸಿದ್ದರು.
