ಉದಯವಾಹಿನಿ, ನವದೆಹಲಿ: ಕಾಂಗ್ರೆಸ್‌‍ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಕ್ಕೂಟದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಮೂರು ಪಕ್ಷಗಳು ಇಂಡಿಯಾ ಒಕ್ಕೂಟ ತೊರೆದು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಸಮಾಜವಾದಿ ಪಕ್ಷ, ತಣಮೂಲ ಕಾಂಗ್ರೆಸ್‌‍ ಮತ್ತು ಶಿವಸೇನೆ (ಯುಬಿಟಿ) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಬೆಂಬಲಿಸಿವೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಇಂಡಿ ಒಕ್ಕೂಟ 2024 ರ ಲೋಕಸಭೆ ಚುನಾವಣೆಗೆ ಮಾತ್ರ ಎಂದು ಹೇಳಿದ್ದಾರೆ. ಮತ್ತು ಪರಿಸ್ಥಿತಿ ಹದಗೆಡಲು ಸಾಧ್ಯವಿಲ್ಲ ಎಂದು ತೋರುತ್ತಿರುವಾಗ, ನ್ಯಾಷನಲ್‌ ಕಾನ್ಫರೆನ್ಸ್‌‍ ನಾಯಕ ಮತ್ತು ಜಮು ಮತ್ತು ಕಾಶೀರ ಸಿಎಂ ಒಮರ್‌ ಅಬ್ದುಲ್ಲಾ ಮತ್ತೊಂದು ಹೊಡೆತ ನೀಡಿ, ಇಂಡಿಯಾ ಬಣವನ್ನು ಸಂಪೂರ್ಣವಾಗಿ ವಿಸರ್ಜಿಸಬೇಕೆಂದು ಸೂಚಿಸಿದ್ದಾರೆ. ಎಎಪಿ ಕಾಂಗ್ರೆಸ್‌‍ ನಾಯಕತ್ವವನ್ನು ವಿರೋಧಿಸಿಕೊಂಡೇ ಬಂದಿದ್ದರೂ ಇದೀಗ ಇಂಡಿಯಾ ಬಣದ ಹಲವಾರು ಪಕ್ಷಗಳು ಎಎಪಿ ಬೆಂಬಲಕ್ಕೆ ನಿಂತಿರುವುದರಿಂದ ಭವಿಷ್ಯದಲ್ಲಿ ಕಾಂಗ್ರೆಸ್‌‍, ಬಿಜೆಪಿ ಹೊರತುಪಡಿಸಿದ ತೃತಿಯ ರಂಗ ಅಸ್ಥಿತ್ವಕ್ಕೆ ಬರುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

error: Content is protected !!