ಉದಯವಾಹಿನಿ, ಮಂಗಳೂರು: ವೈಕುಂಠ ಏಕಾದಶಿ ಅಂಗವಾಗಿ ನಗರದ ಡೊಂಗರಕೇರಿಯ ವೆಂಕಟರಮಣ ದೇವಾಲಯ ಹಾಗೂ ಇಸ್ಕಾನ್ ನಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ವೆಂಕಟರಮಣ ದೇವಾಲಯದ ಆವರಣವು ಹಸಿರಿನಿಂದ ಕಂಗೊಳಿಸುತ್ತಿದೆ. ವರ್ಟಿಕಲ್ ಗಾರ್ಡನ್ ಮಾದರಿಯಲ್ಲಿ ಜೋಡಿಸಿರುವ 10 ಸಾವಿರಕ್ಕೂ ಹೆಚ್ಚು ಸಸಿಗಳು ಕಣ್ಣಿಗೆ ತಂಪು ನೀಡುತ್ತವೆ. ಹಸಿರ ಧ್ಯಾನದಲ್ಲಿ ಭಕ್ತರು ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.
‘ಎರಡು ತಿಂಗಳುಗಳಿಂದ ಆರೆಂಟು ಮಹಿಳೆಯರು, ದೇವಾಲಯದ ಪ್ರಮುಖರು ಸೇರಿ ವಿಭಿನ್ನವಾಗಿ ವೈಕುಂಠ ಏಕಾದಶಿ ಆಚರಿಸುವ ಉದ್ದೇಶದಿಂದ ತುಳಸಿ, ಹರಿವೆ, ಪಾಲಕ್ ಸಿಗಳನ್ನು ಬೆಳಸಿದ್ದೇವೆ. ದೇವರ ದರ್ಶನ ಮಾಡಿ ಬರುವ ಪ್ರಸಾದವಾಗಿ ಒಂದು ಗಿಡಗಳನ್ನು ನೀಡುತ್ತಿದ್ದೇವೆ’ ಎಂದು ಶಿಲ್ಪಾ ಗಾವಸ್ಕರ್, ಸೌಮ್ಯಾ ಹೇಳಿದರು.
ಜನರಲ್ಲಿ ವಿಷಮುಕ್ತ ಸಾವಯವ ಕೃಷಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಹಸಿರು ಏಕಾದಶಿ ಆಚರಿಸಲಾಗಿದೆ. ಇದರ ಹಿಂದೆ ಹಲವರ ಶ್ರಮ ಇದೆ ಎಂದು ಪೂರ್ವ ಸಿದ್ಧತೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಸೂರಜ್ ತಿಳಿಸಿದರು. ‘ದೇವರ ಪ್ರೇರಣೆಯಂತೆ ಆರು ವರ್ಷಗಳಿಂದ ವಿಶೇಷ ಅಲಂಕಾರದೊಂದಿಗೆ ವೈಕುಂಠ ಏಕಾದಶಿ ಆಚರಿಸುತ್ತಿದ್ದೇವೆ. ದೇವಾಲಯದಲ್ಲಿ ಬೆಳಿಗ್ಗೆ ವೈಕುಂಠ ದ್ವಾರ ತೆರೆಯಲಾಗಿದೆ. ಅಷ್ಟಾವಧಾನ ಸೇವೆ ನಡೆಸಲಾಗಿದೆ.
