ಉದಯವಾಹಿನಿ, ಚಿಕ್ಕಮಗಳೂರು: 36ನೇ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಶೃಂಗೇರಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಸುಮಾರು 50 ಸಾವಿರ ಜನ ಸೇರಿದ್ದರು. ‘ಸುವರ್ಣ ಭಾರತೀ’ ಹೆಸರಿನ ಕಾರ್ಯಕ್ರಮಕ್ಕೂ ನಿರೀಕ್ಷೆಗೂ ಮೀರಿ ಜನ ಸೇರಿದ್ದರು.ಎಲ್ಲರೂ ಸೇರಿ ಒಂದೇ ಬಾರಿಗೆ ಮೂರು ಸ್ತೋತ್ರಗಳನ್ನು ಪಠಣ ಮಾಡಿದರು.ಬೃಹತ್ ವೇದಿಕೆ ನಿರ್ಮಾಣವಾಗಿತ್ತು, ಪಟ್ಟಣ ಮತ್ತು ಗುರು ಭವನಕ್ಕೆ ತೆರಳುವ ರಸ್ತೆಗಳಲ್ಲಿ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು.ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿಗಳು ಹಾಗೂ ವಿವಿಧ ಪೀಠಾಧಿಪತಿಗಳನ್ನು ವಾದ್ಯಗೋಷ್ಠಿ, ಛತ್ರಿ, ಚಾಮರ, ಆನೆ, ಅಶ್ವದ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು.
ಪಂಚಾಕ್ಷರಿ ಸ್ತೋತ್ರವನ್ನು ಭಕ್ತರಿಗೆ ಹೇಳುವ ಮೂಲಕ ಚಾಲನೆ ನೀಡಿದರು. ವಿಧುಶೇಖರ ಭಾರತೀ ಸ್ವಾಮೀಜಿ ಕಲ್ಯಾಣವೃಷ್ಟಿ, ಸ್ತವ ಮತ್ತು ಲಕ್ಷ್ಮೀನರಸಿಂಹ ಕರಾವಲಂಭ ಸ್ತೋತ್ರ ಹೇಳಿಕೊಡುವ ಮೂಲಕ ಸ್ತೋತ್ರ ಪಾರಾಯಣಕ್ಕೆ ಚಾಲನೆ ನೀಡಿದರು. ಅರ್ಹ ಜ್ಯೋತಿಷಿಗಳಿಂದ 10 ವರ್ಷಗಳ ಭವಿಷ್ಯ ವರದಿಯನ: ಕೇವಲ ರೂ. 198/- ಜನ್ಮ ಜಾತಕ 10 ವರ್ಷಗಳ ಭವಿಷ್ಯದೊಂದಿಗೆ Only 18/ ಕೋಟಿ ಹರಿಹರ ನಾಮಮೃತ ಲೇಖನ ಯಜ್ಞವನ್ನು ಆಗಮಿಸಿದ್ದ ಸ್ವಾಮೀಜಿಗಳು ಹಾಗೂ ಭಕ್ತಾದಿಗಳು, ವಿದ್ಯಾರ್ಥಿಗಳು 108 ಬಾರಿ ಬರೆಯುವ ಮೂಲಕ ಯಜ್ಞದಲ್ಲಿ ಪಾಲ್ಗೊಂಡರು. ಶಾರದಾ ಪೀಠದ ಗುರು ವಿಧುಶೇಖರ ಭಾರತೀ ಸ್ವಾಮೀಜಿ, ‘ಸ್ತೋತ್ರ ಎಂದರೆ ಭಗವಂತನ ಜೊತೆ ಮಾತನಾಡುವ ಮಾತು. ಸ್ತೋತ್ರವನ್ನು ಪಠಿಸುವುದರಿಂದ 3 ನದಿಗಳಲ್ಲಿ ಸ್ನಾನ ಮಾಡಿ. ಪುಣ್ಯ ಮಾಡಿದ ಹಾಗೆ. ಭಗವಂತನನ್ನು ಆಶ್ರಯಿಸಿದವರಿಗೆ ಅನುಗ್ರಹ ಮಾಡುತ್ತಾರೆ.

Leave a Reply

Your email address will not be published. Required fields are marked *

error: Content is protected !!