ಉದಯವಾಹಿನಿ , ದಾವಣಗೆರೆ : ಬನಶಂಕರಿ ದೇವಸ್ಥಾನ ಸಮಿತಿ, ಬನಶಂಕರಿ ಯುವಕರ ಸಂಘದ ವತಿಯಿಂದ ಬನದ ಹುಣ್ಣಿಮೆ ಪ್ರಯುಕ್ತ ನಗರದ ಡಿಸಿಎಂ ಲೇಔಟ್ ಹಿಂಭಾಗದ ರಾಜೇಂದ್ರ ಬಡಾವಣೆಯಲ್ಲಿನ ಶ್ರೀ ಬನಶಂಕರಿ ದೇವಿಯ ದೇವಸ್ಥಾನದಲ್ಲಿ 11ನೇ ವರ್ಷದ ಜಾತ್ರಾ ಮಹೋತ್ಸವವನ್ನು ಇದೇ ಇಂದಿನಿಂದ ಮೂರು ದಿನಗಳು ಹಮ್ಮಿಕೊಳ್ಳಲಾಗಿದೆ.ಹಂಪಿಯ ಹೇಮಕೂಟ ಗಾಯತ್ರಿ ಪೀಠದ ದೇವಾಂಗ ಜಗದ್ಗುರು ದಯಾನಂದ ಪುರಿ ಶ್ರೀಗಳ ಕೃಪಾ ಆಶೀರ್ವಾದದೊಂದಿಗೆ ಈ ಜಾತ್ರಾ ಮಹೋತ್ಸವ ಜರುಗಲಿದ್ದು. ಇಂದು ಬೆಳಗ್ಗೆ ನಂದ್ವಿ ಧ್ವಜಾರೋಹಣ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿದೆ. ಜ. 12ರ ಬೆಳಗ್ಗೆ 7:30ಕ್ಕೆ ಗಂಗಾ ಪೂಜೆ, ಬೆಳಗ್ಗೆ 10:30 ಕ್ಕೆ ಶ್ರೀ ಶಾಕಾಂಬರಿ ವ್ರತ, ವಿಶೇಷ ತರಕಾರಿ ಅಲಂಕಾರ ನೆರೆವೇರಲಿದೆ.ಜ. 13ರಂದು ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10:30 ರಿಂದ 11:30 ರವರೆಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ 3:30ಕ್ಕೆ ಶ್ರೀ ಬನಶಂಕರಿ ದೇವಿಯ ಬೃಹತ್ ಮೆರವಣಿಗೆ ನಿಟ್ಟವಳ್ಳಿಯ ರಾಜಬೀದಿಗಳಲ್ಲಿ ಸಾಗಲಿದೆ.
