ಉದಯವಾಹಿನಿ, ಯಾದಗಿರಿ: ಮೈಲಾರಲಿಂಗ ದೇವರ 77 ಕ್ಷೇತ್ರಗಳ ಪೈಕಿ ತಾಲ್ಲೂಕಿನ ಮೈಲಾಪುರ ಕೊನೆಯ ಕ್ಷೇತ್ರವಾಗಿದೆ. ದೇಶದ 77 ಕ್ಷೇತ್ರಗಳಲ್ಲಿ ಒಂದೊಂದು ಅವತಾರದಲ್ಲಿ ಮೈಲಾರಲಿಂಗ ದೇವರು ಕಾಣಿಸಿಕೊಂಡಿದ್ದಾರೆ ಎನ್ನುವುದು ಭಕ್ತರ ನಂಬಿಕೆ.ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರನ ಜಾತ್ರೆಗೆ ಸಕಲ ಸಿದ್ಧತೆ ನಡೆದಿದ್ದು. (ಜ.14) ಮಂಗಳವಾರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸೋಮವಾರ ರಾತ್ರಿಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ರಾತ್ರಿ 8ರಿಂದ 12ರವರೆಗೆ ಧೂಳುಗಾಯಿ ದರ್ಶನ ನಡೆಯಲಿದೆ. ರಾತ್ರಿ 1ರಿಂದ ಬೆಳಗಿನ ಜಾವ 5 ಗಂಟೆವರೆಗೆ ಮಲ್ಲಯ್ಯನಿಗೆ ರುದ್ರಾಭಿಷೇಕ ಜರುಗಲಿದೆ.1ರಿಂದ 2.30ರ ತನಕ ಹೊನ್ನಕೇರಿಯಲ್ಲಿ ಗಂಗಾಸ್ನಾನ ನಡೆಯಲಿದೆ. 2.30ರ ನಂತರ ಸರಪಳಿ ಹರಿಯುವ ಕಾರ್ಯಕ್ರಮ, ರಾತ್ರಿ 12 ಗಂಟೆಗೆ ಗಂಗೀ ಮಾಳಮ್ಮ ಮಲ್ಲಯ್ಯ ವಿವಾಹ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಮೂಲಗಳು ಹೇಳುವ ಮಾತಾಗಿದೆ.

ಮಲ್ಲಯ್ಯನ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಗ್ರಾಮಕ್ಕೆ ಕೂಡುವ 6 ರಸ್ತೆಗಳಿದ್ದು, ಅವುಗಳಿಗೆ ಚೆಕ್ ಪೋಸ್ಟ್ ತೆರೆದು ಕಾರ್ಯ ನಿರ್ವಹಿಸಲಾಗುತ್ತಿವೆ. ಜಾತ್ರೆಗೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಸ್ವಚ್ಛತೆ ಇರಲಿ: ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ನಡೆಯಲಿದೆ. ಜಾತ್ರೆ ಅಂಗವಾಗಿ ದೇವಸ್ಥಾನ ಪಕ್ಕದ ಹೊನ್ನಕೆರೆಯಲ್ಲಿ ಪುಣ್ಯಸ್ನಾನ ಮಾಡುವುದು ವಾಡಿಕೆ. ಸ್ನಾನದ ಬಿಸಾಡುವುದರಿಂದ ಇಡೀ ಪರಿಸರ ಕಲುಷಿತವಾಗುತ್ತಿದೆ. ಇದರ ಜೊತೆಗೆ ಜಾತ್ರೆಯ ವಿವಿಧ ತ್ಯಾಜ್ಯಗಳನ್ನು ಕೆರೆ ಅಕ್ಕಪಕ್ಕದಲ್ಲಿ ಬಿಸಾಡಿದ್ದು, ಅಸ್ವಚ್ಛತೆ ಕಂಡು ಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!