ಉದಯವಾಹಿನಿ, ಬೆಂಗಳೂರು: ಕರ್ನಾಟಕ ಜನತೆಯ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಬಹುದಿನಗಳ ಬೇಡಿಕೆಯಂತೆ ಅಮೆರಿಕದ ದೂತಾವಾಸ (ಯುಎಸ್ ಕಾನ್ಸುಲೇಟ್) ಕಚೇರಿಯು ಇಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಯಾಗಿದೆ. ಕರ್ನಾಟಕದ ಜನತೆಯು ಅಮೆರಿಕಾಕ್ಕೆ ಪ್ರಯಾಣಿಸ ಬೇಕೆಂದರೆ ವೀಸಾ ಪಡೆಯಲು ದೂರದ ದೆಹಲಿ, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈಗೆ ತೆರಳಬೇಕಿತ್ತು. ಇದನ್ನು ತಪ್ಪಿಸಲು ರಾಜಧಾನಿ ಬೆಂಗಳೂರಿನಲ್ಲಿ ಶಾಶ್ವತವಾಗಿ ಕಾರ್ಯ ನಿರ್ವಹಿಸುವ ಧೂತಾವಾಸ ಕಚೇರಿಯನ್ನು ಈಗ ತೆರೆಯಲಾಗಿದೆ.ಅಮೆರಿಕ ದೂತವಾಸ ಕಚೇರಿಯಲ್ಲಿ ವೀಸಾ ಸೇವೆ ಇನ್ನು ಲಭ್ಯವಾಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಒಂದು ವಾರದ ನಂತರ ಇಲ್ಲಿಂದಲೇ ವೀಸಾಗಳನ್ನು ಪಡೆದು ಪ್ರಯಾಣಿಸಬಹುದು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಸಂಸದರಾದ ತೇಜಸ್ವಿ ಸೂರ್ಯ, ಡಾ.ಸಿ.ಎನ್.ಮಂಜುನಾಥ್, ಭಾರತದಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಜಿ ಖ್ಯಾತ ಉದ್ಯಮಿ ಕಿರಣ್ ಮಂಜುಂದರ್ ಷಾ, ಕ್ರಿಸ್ ಗೋಪಾಲಕೃಷ್ಣನ್, ಯುಎಸ್ ದೂತವಾಸ ಅಧಿಕಾರಿಗಳುಮತ್ತಿತರರು ಭಾಗಿಯಾಗಿದ್ದರು.
ಇತ್ತೀಚೆಗೆ ನಡೆದ ಅಮೆರಿಕ ಮತ್ತು ಭಾರತ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಸಂವಾದದಲ್ಲಿ ಮಾತನಾಡಿದ್ದ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದೇವೆ. ಬೆಂಗಳೂರಿನಲ್ಲಿ ದೂತವಾಸ ಕಚೇರಿ ಹೊಂದಿರದ ಏಕೈಕ ದೇಶ ಅಮೆರಿಕ ಆಗಿತ್ತು. ಆದರೆ, 2025ರ ಜನವರಿಯಲ್ಲಿ ರಾಯಭಾರ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದ್ದರು.
