ಉದಯವಾಹಿನಿ, ಆಲಮೇಲ: ತಾಲೂಕಿನ ಸುಕ್ಷೇತ್ರ ತಾರಾಪೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಮಕರ ಸಂಕ್ರಾಂತಿಯ ನಿಮಿತ್ಯವಾಗಿ ಶ್ರೀ ತಾರಕೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ದೇವರಿಗೆ ಮಹಾ ರುದ್ರಾಅಭಿಷೇಕ, ಬಿಲ್ವಾರ್ಚನೆ, ಮಂಗಳಾರುತಿ, ಅಷ್ಟೋತ್ತರ ಶತನಾಮಾವಳಿ ಜರುಗಿತು .
ನಂತರ ಮಹಾಪ್ರಸಾದ ವಿತರಣೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು.ಪಲ್ಲಕ್ಕಿ ಉತ್ಸವವು ಡೊಳ್ಳು, ಚಿಟ್ಟಹಲಿಗೆ, ಪಟಾಕಿಗಳನ್ನು ಸಿಡಿಸುತ್ತಾ ಭೀಮಾ ನದಿಯಲ್ಲಿ ಮುಳುಗಿ ಪುಣ್ಯ ಸ್ಥಾನವನ್ನು ಮಾಡಿ ಹಾಗೂ ಕುಂಭ ಕಳಸದೊಡನೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮೇಲಿನ ಗುಡಿಗೆ ಬಂದು ತಲುಪಿತು.
