ಉದಯವಾಹಿನಿ, ಬೀಜಿಂಗ್: ಚೀನಾದ ಜನಸಂಖ್ಯೆಯು ಕಳೆದ ವರ್ಷದಿಂದ ಸತತ ಮೂರನೇ ವರ್ಷವೂ ಕುಸಿದಿದೆ ಎಂದು ಅದರ ಸರ್ಕಾರ ಹೇಳಿದೆ, ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಕ್ಕೆ ಮತ್ತಷ್ಟು ಜನಸಂಖ್ಯಾ ಸವಾಲು ಎದುರಾಗಿದೆ . ಇದು ಹಿರಿಯರ ಜನಸಂಖ್ಯೆ ಹೆಚ್ಚಿದೆ ಕೆಲಸ ಮಾಡುವ ಯುವಸಮುದಾಯದ ಕೊರತೆಯನ್ನು ಎದುರಿಸುತ್ತಿದೆ.ಕಳೆದ 2024 ರ ಅಂತ್ಯದ ವೇಳೆಗೆ ಚೀನಾದ ಜನಸಂಖ್ಯೆಯು 1.408 ಶತಕೋಟಿ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 1.39 ಮಿಲಿಯನ್ ಕುಸಿತವಾಗಿದೆ ಎಂದು ಅಂಕಿಅಂಶ ತಿಳಿಸಿದೆ.
ಆದರೆ ವಿಶೇಷವಾಗಿ ಪೂರ್ವ ಏಷ್ಯಾದ ಜಪಾನ್,ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು ಇತರ ರಾಷ್ಟ್ರಗಳು ತಮದೇಶದಲ್ಲಿ ಜನನ ಪ್ರಮಾಣ ದರಗಳು ಕುಸಿಯುತ್ತಿದೆ.ಹೆಚ್ಚುತ್ತಿರುವ ಜೀವನ ವೆಚ್ಚಗಳು, ಯುವಜನರು ಉನ್ನತ ಶಿಕ್ಷಣ ಮತ್ತು ವೃತ್ತಿಜೀವನವನ್ನು ಅನುಸರಿಸುವಾಗ ಮದುವೆ ಮತ್ತು ಮಕ್ಕಳ ಜನನವನ್ನು ಮುಂದೂಡಲು ಅಥವಾ ತಳ್ಳಿಹಾಕುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಜನರು ದೀರ್ಘಕಾಲ ಬದುಕುತ್ತಿದ್ದರೂ, ನವಜಾತ ಶಿಶುಗಳ ಜನನ ದರವನ್ನು ಕಾಯ್ದುಕೊಳ್ಳಲು ಅದು ಸಾಕಾಗುವುದಿಲ್ಲ.ವಲಸೆಯನ್ನು ಕಡಿಮೆ ಅನುಮತಿಸುವ ಚೀನಾದಂತಹ ದೇಶಗಳು ವಿಶೇಷವಾಗಿ ಅಪಾಯದಲ್ಲಿವೆ ಎಂದು ಪರಿಣಿತರು ಹೇಳಿದ್ದಾರೆ.
