ಉದಯವಾಹಿನಿ, ಮಾಲೂರು: ಪುರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೂಡನೆ ಪಟ್ಟಣದಲ್ಲಿ ದಿಢೀರ್ ಕಾರ್ಯಚರಣೆ ನಡೆಸಿ ಪುಟ್ಪಾತ್ ಅಂಗಡಿಗಳ ಒತ್ತುವರಿಗಳನ್ನು ತೆರವುಗೊಳಿಸಿದರು. ಈಕಾರ್ಯಚರಣೆಯಿಂದ ಸುಗುಮ ಸಂಚಾರಕ್ಕೆ ವ್ಯವಸ್ಥೆ ಆದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಸಾರ್ವಕನಿಕರ ನಿರಂತರ ದೂರಿನ ಹಿನ್ನೆಲೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷ ಎ.ರಾಜಪ್ಪ ನೇತೃತ್ವದಲ್ಲಿ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಹಾಗೂ ಅವರ ಸಿಬ್ಬಂದಿಗಳು ಪುರಸಭೆ ಸುತ್ತ ಮುತ್ತಲರಸ್ತೆ, ತಾಲೂಕು ಕಚೇರಿ ರಸ್ತೆ ಸೇರಿದಂತೆ ಬಸ್ ನಿಲ್ದಾಣದಿಂದ ಪುರಸಭೆವರೆಗಿನ ರಸ್ತೆ ಬದಿ ಅಂಗಡಿಗಳ ಒತ್ತುವರಿಯನ್ನು ತೆರವುಗೊಳಿಸಿದರು. ನೆಹರೂ ಬಡಾವಣೆ ರಸ್ತೆಯಲ್ಲಿ ಅಂಗಡಿ ಮಾಲೀಕನೊಬ್ಬ ಕಾರ್ಯಚರಣೆ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದಾಗ ಅತನೂಡನೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಪ್ಪವಾಗ್ವಾದಕ್ಕೆ ಇಳಿದರು. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಒತ್ತುವರಿ ಮಾಡಿದರೆ ತೆರವುಗೊಳಿಸುತ್ತೇವೆ. ನಿಮ್ಮ ಜಾಗದಲ್ಲಿ ನೀವು ವ್ಯಾಪಾರ ಮಾಡಿ ಎಂದು ರಾಜಪ್ಪತಾಕೀತು ಮಾಡಿದರು. ಅರಣ್ಯ ಇಲಾಖೆ ಮುಂಭಾಗ ಸರ್ವಾಜನಿಕ ಆಸ್ವತ್ರೆ ಮುಂಭಾಗ ತೆರವುಗೊಳಿಸಲು ರಸ್ತೆ ಬದಿ ಅಂಗಡಿಯವರು ಅಡ್ಡಿಪಡಿಸಲುಯತ್ನಿಸಿದರಾದರೂ ಪೊಲೀಸರುಗಳು ಕಾರ್ಯಚರಣೆಯಲ್ಲಿ ಇದ್ದ ಕಾರಣ ಸುಮ್ಮನಾದರು
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷೆ ಕೋಮಲ ಮುಖ್ಯರಸ್ತೆಗೆ ಬದಲಿ ರಸ್ತೆಯಾಗಿರುವ ನೆಹರೂ ಬಡಾವಣೆ ರಸ್ತೆಯಲ್ಲಿ ಪುಟ್ ಪಾತ್ ಅಂಗಡಿಯವರ ಒತ್ತುವರಿಯಿಂದ ಸುಗುಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ನಿರಂತರ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಲಾಗಿದ್ದು, ಇದು ನಿರಂತರವಾಗಿ ನಡೆಯಲಿದೆ ಎಂದರು.

 

Leave a Reply

Your email address will not be published. Required fields are marked *

error: Content is protected !!