ಉದಯವಾಹಿನಿ, ಮೈಸೂರು: ಮೈಸೂರಿನ ಲಿಂಗಂಬುದ್ಧಿ ಉದ್ಯಾನವನದಲ್ಲಿ ಇದೀಗ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಹಲವರಿಗೆ ಚಿರತೆ ಓಡಾಡಿರುವುದು ಕಂಡು ಬಂದಿದೆ.
ರಾಮಕೃಷ್ಣನಗರ ಸಮೀಪವಿರುವ ಲಿಂಗಾಂಬುದ್ದಿ ಕೆರೆ ಉದ್ಯಾನವನದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದವರಿಗೆ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಲಿಂಗಬುಂದ್ಧಿ ಕೆರೆ ಉದ್ಯಾನವನ ಸಾರ್ವಜನಿಕರ ಪ್ರವೇಶಕ್ಕೆ ಇದೀಗ ನಿರ್ಬಂಧ ವಿಧಿಸಲಾಗಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಚರಣೆ ನಡೆಸುತ್ತಿದ್ದಾರೆ.
