ಉದಯವಾಹಿನಿ: ಬೆಂಗಳೂರು: ಕೆಲಸಕ್ಕೆ ಗೈರು ಹಾಜರಿ, ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ನೌಕರರು ಕಾಣದಿರುವ ಬಗ್ಗೆ ಕೆಂಡಾಮಂಡಲರಾದ ಲೋಕಾಯುಕ್ತರು ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಗರದಲ್ಲಿ ನಡೆದಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಹಿಂಭಾಗದಲ್ಲಿರುವ ತೂಕ ಮತ್ತು ಅಳತೆ ಮೌಲ್ಯಮಾಪನ ಇಲಾಖೆಗೆ ದಿಢೀರ್ ದಾಳಿ ನಡೆಸಿದ ಉಪ ಲೋಕಾಯುಕ್ತ ವೀರಪ್ಪ ಮತ್ತು ಅಧಿಕಾರಿಗಳ ತಂಡ ಅಲ್ಲಿನ ಅವ್ಯವಸ್ಥೆಯನ್ನು ಕಂಡು ರಾಜಧಾನಿಯಲ್ಲೇ ಈ ರೀತಿಯ ವ್ಯವಸ್ಥೆ ಎಲ್ಲೂ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕಚೇರಿಯ ಕೆಲ ವಿಭಾಗ ಬೀಗ ಹಾಕಲಾಗಿತ್ತು. ಇದನ್ನು ಕೇಳಿದಾಗ ಅಧಿಕಾರಿಗಳು ಇನ್ನೂ ಬರಬೇಕು ಎಂದು ಅಲ್ಲಿದ್ದ ಡಿ ದರ್ಜೆ ನೌಕರರು ಹೇಳಿದಾಗ ಸಮಯ 11 ಗಂಟೆಯಾಗಿದೆ. ಇನ್ನೂ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದರು.
ಹಾಜರಿಪುಸ್ತಕವನ್ನು ನೋಡಿದಾಗ ಕೆಲವರು ಸಹಿ ಹಾಕಿದ್ದರೂ ಅವರ ಆಸನದಲ್ಲಿ ಇಲ್ಲದಿದ್ದನ್ನು ಗಮನಿಸಿ ನಂತರ ಕೆಲವರು ಗೈರುಹಾಜರಾಗಿರುವುದರ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ.
ಲೋಕಾಯುಕ್ತ ದಾಳಿ ನಡೆದಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೆಲ ನೌಕರರು ಅಲರ್ಟ್ ಆಗಿದ್ದು, ಕಚೇರಿಯ ಹೊರಗೆ ಕಾಣಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!