ಉದಯವಾಹಿನಿ,ಸಕಲೇಶಪುರ: ‘ಲಯನ್ಸ್‌ ಸಂಸ್ಥೆ ₹38 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹಿಂದೂ ಮುಕ್ತಿಧಾಮವನ್ನು ಹೈಟೆಕ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿ ಅತ್ಯಂತ ಮಹತ್ವದ ಸೇವೆ ಸಮರ್ಪಿಸಿದೆ’ ಎಂದು ಮಂಗಳೂರಿನ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದಸ್ವಾಮಿ ಹೇಳಿದರು.ಲಯನ್ಸ್‌ ಸಂಸ್ಥೆ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ ನೇತೃತ್ವದಲ್ಲಿ ಮುಕ್ತಿಧಾಮ ಲೋಕಾರ್ಪಣೆ ಮಾಡಿ ಮಾತನಾಡಿದರು.ಈ ಮುಕ್ತಿಧಾಮ ಹಿಂದೆ ಹೇಗಿತ್ತೊ ಗೊತ್ತಿಲ್ಲ, ಆದರೆ, ನವೀಕರಣದ ನಂತರ ಒಂದು ಸುಂದರ ಉದ್ಯಾನ, ದೇವಸ್ಥಾನದಂತೆ ಕಂಗೊಳಿಸುತ್ತಿದೆ. ಗೋಡೆಯ ಮೇಲೆ ವರ್ಲಿ ಆರ್ಟ್‌, ನೆಲಕ್ಕೆ ಆಕರ್ಷಕ ಇಂಟರ್‌ಲಾಕ್‌, ಶಿವನ ಸುಂದರ ಮೂರ್ತಿ, ಅದರ ಸುತ್ತಲೂ ಕಾರಂಜಿ, ಆವರಣದ ಸುತ್ತಲೂ ಹೂವಿನ ಗಿಡಗಳು, ಮೃತದೇಹವನ್ನು ತಂದು ಇಡಲು ನವೀನ ಮಾದರಿಯ ಕಟ್ಟೆ ಎಲ್ಲರೂ ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಮಾಡಲಾಗಿದೆ’ ಎಂದು ಲಯನ್ಸ್‌ ಸಂಸ್ಥೆಯನ್ನು ಅಭಿನಂದಿಸಿದರು.ಲಯನ್ಸ್‌ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಸಂಜಿತ್‌ ಶೆಟ್ಟಿ ಮಾತನಾಡಿ, ಲಯನ್ಸ್‌ ಸಂಸ್ಥೆಯ ಸದಸ್ಯರ ಆರ್ಥಿಕ ನೆರವು ಹಾಗೂ ಎಲ್ಲರ ಸಹಕಾರದಿಂದ ಮುಕ್ತಿಧಾಮನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಯಿತು’ ಎಂದರು.

Leave a Reply

Your email address will not be published. Required fields are marked *

error: Content is protected !!