ಉದಯವಾಹಿನಿ, ಕೋಲಾರ : ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು, ವಿಶೇಷವಾಗಿ ರಸ್ತೆ ಅಪಘಾತದ ಅಪಾಯದಲ್ಲಿರುವ ಮಕ್ಕಳು ಮತ್ತು ಯುವಕರು. ಅಂಕಿಅಂಶಗಳ ಪ್ರಕಾರ (ವಿಶ್ವ ಆರೋಗ್ಯ ಸಂಸ್ಥೆ, ೨೦೦೮), ಹೆಚ್ಚಿನ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ಮತ್ತು ಸಾವಿಗೆ ಪ್ರಮುಖ ಕಾರಣವೆಂದರೆ ರಸ್ತೆ ಆಘಾತದಿಂದ ಎಂದು ಕಂಡುಬಂದಿದೆ ಎಂದು ಗಲ್‌ಪೇಟೆ ಠಾಣೆಯ ವೃತ್ತ ನಿರೀಕ್ಷಕ ಎಂ ಜಿ ಲೋಕೇಶ್ ತಿಳಿಸಿದರು.
ಮೈ ಭಾರತ್-ನೆಹರು ಯುವ ಕೇಂದ್ರ ಕೋಲಾರ,ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ, ಪೊಲೀಸ್ ಇಲಾಖೆ ಕೋಲಾರ, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಕೋಲಾರ, ರೋಟರಿ ಕೋಲಾರ್ ಲೈಕ್ ಸೈಡ್ ಹಾಗೂ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಎಜುಕೇಶನ್ ಅಂಡ್ ಚಾರಿಟೇಬಲ್ ಟೆಸ್ಟ್ ಇವರ ಸಹಯೋಗದಲ್ಲಿಯಿಂದ ಬೆಳಿಗ್ಗೆ ಜನವರಿ ೨೩ ನೇ ತಾರೀಕು೧೦.೩೦ ಗಂಟೆಗೆ ರಸ್ತೆಗೆ ಸುರಕ್ಷತೆಯ ಬಗ್ಗೆ ಅರಿವು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಶಾಮ್ಸ್ ಎಂ ಬಿ ಅಧ್ಯಕ್ಷರು ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ ರವರು ಮಾತನಾಡಿ ರಸ್ತೆ ಅಪಘಾತಗಳಿಂದಾಗಿ ಪ್ರಪಂಚದಾದ್ಯಂತ ವಾರ್ಷಿಕವಾಗಿ ಲಕ್ಷಾಂತರ ಜೀವಗಳು ಕಳೆದುಹೋಗುತ್ತವೆ, ಇದರ ಪರಿಣಾಮವಾಗಿ ವ್ಯಕ್ತಿಗಳಿಗೆ ಮತ್ತು ರಾಷ್ಟ್ರಕ್ಕೆ ಹಣಕಾಸಿನ ಮತ್ತು ಸಂಪನ್ಮೂಲಗಳ ದೊಡ್ಡ ನಷವಾಗುತ್ತದೆ ಎಂದರು.
