ಉದಯವಾಹಿನಿ, ಮೈಸೂರು : ಕಳೆದ ವಾರ ನಗರದ ವೈದ್ಯ ಡಾ. ಅಜಯ್ ಹೆಗ್ಡೆ ಅವರು ನೀಡಿದ್ದ ಎಪಿಡ್ಯೂರಲ್ ಇಂಜೆಕ್ಷನ್ ಸರಿಹೊಂದುವ ಮೂಲಕ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ತಿಳಿದುಬಂದಿದೆ.
ಬೆನ್ನು ನೋವಿನಿಂದ ಗುಣಮುಖರಾಗಿರುವ ದರ್ಶನ್ ,ನಾನು ಮೊದಲಿಗಿಂತಲೂ ಚೆನ್ನಾಗಿದ್ದೇನೆ ಎಂದು ವೈದ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಕಳೆದ ವಾರ ಕೊಟ್ಟ ಇಂಜೆಕ್ಷನ್‌ನಿಂದ ದರ್ಶನ್ ಬೆನ್ನು ನೋವಿನಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಬಹುತೇಕ ಇಂಜೆಕ್ಷನ್‌ನಿಂದಲೇ ನೋವು ನಿವಾರಣೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈಗಾಗಲೇ ಪ್ರತಿನಿತ್ಯ ವರ್ಕೌಟ್ ಶುರು ಮಾಡಿರುವ ದರ್ಶನ್ ಫುಲ್ ಬಾಡಿ ವರ್ಕೌಟ್ ಶುರು ಮಾಡಿದ ನಂತರ ಏನಾದರು ನೋವು ಕಾಣಿಸಿಕೊಂಡರೆ ಮತ್ತೆ ಪರೀಕ್ಷೆಗೆ ಒಳಪಡಲಿದ್ದಾರೆ.
ಫೆಬ್ರವರಿಯಿಂದ ಶೂಟಿಂಗ್‌ನಲ್ಲಿ ನಿರಂತರವಾಗಿ ಭಾಗವಹಿಸುವ ನಟ ದರ್ಶನ್ ದೇಹವನ್ನು ಮೊದಲಿನ ರೀತಿ ತರಲು ವರ್ಕೌಟ್‌ಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ವೈದ್ಯರ ಸಲಹೆಯಂತೆ ಮತ್ತೆ ಎಂದಿನ ಶೈಲಿಯಲ್ಲೇ ದರ್ಶನ್ ನಿಧಾನವಾಗಿ ಜಿಮ್‌ನಲ್ಲಿ ಕಸರತ್ತು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!