ಉದಯವಾಹಿನಿ, ಮೈಸೂರು: ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಒಡೆಯರ್ ಅವರ ಆಯ್ಕೆಯ ವಿರುದ್ಧ ಬಿಎಸ್ಪಿ (BSP) ಅಭ್ಯರ್ಥಿ ರೇವತಿ ರಾಜ್ ಅಲಿಯಾಸ್ ಭೀಮಪುತ್ರಿ ರೇವತಿ ರಾಜ್ ಅವರು ಕೋಲಾರದಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟಿತ್ತು ಅರ್ಜಿಯಲ್ಲಿ. ಯದುವೀರ ಒಡೆಯರ್ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಲು ಮತ್ತು ಈ ಕ್ಷೇತ್ರದಲ್ಲಿ ಪುನಃ ಚುನಾವಣೆಯನ್ನು ನಡೆಸಲು ಕೋರಲಾಗಿತ್ತು.
ನ್ಯಾಯಮೂರ್ತಿಗಳ ಆದೇಶ: ಈ ಪ್ರಕರಣವನ್ನು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠ ನಿನ್ನೆ ವಿಚಾರಣೆ ನಡೆಸಿದ್ದು, ಸಂಸದ ಯದುವೀರ ಒಡೆಯರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಆಯ್ಕೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಅರ್ಜಿಯ ಹಿನ್ನೆಲೆ: ರೇವತಿ ರಾಜ್ ಅವರು ತಮ್ಮ ಅರ್ಜಿಯಲ್ಲಿ ಚುನಾವಣೆ ವೇಳೆ ಹಲವು ಅಕ್ರಮಗಳು ನಡೆದಿರುವುದನ್ನು ಉಲ್ಲೇಖಿಸಿದ್ದಾರೆ. ಈ ಅಕ್ರಮಗಳ ಮೇಲೆ ತನಿಖೆ ನಡೆಸಿ, ಯೋಗ್ಯ ತೀರ್ಮಾನ ಕೈಗೊಳ್ಳುವಂತೆ ಹೈಕೋರ್ಟ್ ಮನವಿ ಸಲ್ಲಿಸಿದ್ದರು.
