ಉದಯವಾಹಿನಿ, ಬೆಂಗಳೂರು: ಸರ ಅಪಹರಣ, ಮನೆ ಕಳವು ಮಾಡುತ್ತಿದ್ದ ಆರು ಮಂದಿ ಜೊತೆಗೆ ಮಹಿಳೆಯೊಬ್ಬಳನ್ನು ಬಂಧಿಸಿರುವ ನಗರ ಪೊಲೀಸರು ೩೭.೫೦ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಬಂಧಿಸಿರುವ ೬ ಮಂದಿ ಆರೋಪಿಗಳಿಂದ ೨೮.೫೦ ಲಕ್ಷ ಮೌಲ್ಯದ ೪೫೦ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡರೆ,ಕುಮಾರಸ್ವಾಮಿ ಲೇಔಟ್ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿ ೯ ಲಕ್ಷ ಮೌಲ್ಯದ ೧೨೫ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊಡಿಗೇಹಳ್ಳಿಯ ವಾಸಿಯೊಬ್ಬರು ಕುಟುಂಬ ಸಮೇತ ಕಳೆದ ವರ್ಷದ ಮಾರ್ಚ್ ೩೦ ರಂದು ಹೋಗಿ ವಾಪಾಸ್ ಬರುವಷ್ಟರಲ್ಲಿ ಮುಂಬಾಗಿಲನ್ನು ಹೊಡೆದು, ಕೊಠಡಿಯ ಬೀರುವಿನಲ್ಲಿಟ್ಟಿದ್ದ ೩೦ ಗ್ರಾಂ ಚಿನ್ನಾಭರಣ ಹಾಗೂ ೨ ಬೆಳ್ಳಿಯ ದೀಪಗಳನ್ನು ಯಾರೋ ಅಪರಿಚಿತರು ಕಳವು ಮಾಡಲಾಗಿತ್ತು.
