ಉದಯವಾಹಿನಿ, ನವದೆಹಲಿ: ಎಎಪಿ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಹರಿಯಾಣ ಸರ್ಕಾರ ತೀರ್ಮಾನಿಸಿದೆ. ಬಿಜೆಪಿ ಆಡಳಿತವಿರುವ ಹರಿಯಾಣವೂ ಚುನಾವಣೆಗೆ ಮುನ್ನ ದೆಹಲಿಯ ನೀರು ಸರಬರಾಜನ್ನು ಅಡ್ಡಿಪಡಿಸಲು ಯಮುನಾ ನೀರಿಗೆ ವಿಷ ವನ್ನು ಬೆರೆಸುತ್ತಿದೆ ಎಂಬ ಆರೋಪದ ಮಾಡಿದ್ದ ಎಎಪಿ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಹರಿಯಾಣ ಸರ್ಕಾರ ಯೋಜಿಸುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ವಿರುದ್ಧ ದೂರಿನೊಂದಿಗೆ ಕೇಸರಿ ಪಕ್ಷವು ಚುನಾವಣಾ ಆಯೋಗವನ್ನು (ಇಸಿಐ) ಸಂಪರ್ಕಿಸಲಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಕೇಜ್ರಿವಾಲ್‌ ಅವರು, ಹರಿಯಾಣದಿಂದ ದೆಹಲಿ ಮತ್ತು ಇತರ ರಾಜ್ಯಗಳಿಗೆ ಹರಿಯುವ ಯಮುನಾದಲ್ಲಿ ಹೆಚ್ಚಿನ ಮಟ್ಟದ ಅಮೋನಿಯಾವನ್ನು ಹರಿಯಾಣದ ನಯಾಬ್‌ ಸಿಂಗ್‌ ಸೈನಿ ಸರ್ಕಾರವು ಉದ್ದೇಶಪೂರ್ವಕವಾಗಿ ನದಿಗೆ ಬಿಡುತ್ತಿದೆ ಎಂದು ಆರೋಪಿಸಿದ್ದರು.
ಹರಿಯಾಣದಿಂದ ಬರುತ್ತಿರುವ ನೀರಿನಲ್ಲಿ ಏನೋ ತಪ್ಪಾಗಿದೆ ಎಂದು ದೆಹಲಿ ಜಲ ಮಂಡಳಿ ಅಧಿಕಾರಿಗಳು ಶಂಕಿಸಿದ್ದಾರೆ. ಅದನ್ನು ಪರೀಕ್ಷಿಸಿದಾಗ ವಿಷ ಬೆರೆಸಿರುವುದು ಪತ್ತೆಯಾಗಿದೆ. ನೀವು ದೆಹಲಿಯ ಜನರನ್ನು ಕೊಲ್ಲಲು ಬಯಸುತ್ತೀರಿ. ಅವರು ಅದನ್ನು ಏಕೆ ಮಾಡಿದರು? ದೆಹಲಿಯಲ್ಲಿ ಒಂದಷ್ಟು ಜನ ಸತ್ತರೆ, ನನ್ನ ಮೇಲೆ ಮಾನಹಾನಿ ಮಾಡಿ ಮತ ಗಳಿಸಲು ಎಲ್ಲ ಆಪಾದನೆಯೂ ನನ್ನ ಮೇಲೆ ಬೀಳುತ್ತದೆ ಎಂದು ಭಾವಿಸಿದ್ದರು. ನೀವು ದೆಹಲಿಯ ಜನರನ್ನು ಕೊಲ್ಲಲು ಬಯಸುತ್ತೀರಾ? ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದರು. ಕೇಜ್ರಿವಾಲ್‌ ಅವರ ಹೇಳಿಕೆಯನ್ನು ಬಿಜೆಪಿ ತಕ್ಷಣವೇ ಖಂಡಿಸಿತು. ಕೇಜ್ರಿವಾಲ್‌ ತಮ ಆತಸಾಕ್ಷಿಯನ್ನು ಕಳೆದುಕೊಂಡಿದ್ದಾರೆ ಮತ್ತು ಅವರು ಜನರ ಕ್ಷಮೆಯಾಚಿಸಬೇಕು ಎಂದು ಮುಖ್ಯಮಂತ್ರಿ ಸೈನಿ ಹೇಳಿದ್ದಾರೆ.ಹರಿಯಾಣದ ಜನರು ಯಮುನಾವನ್ನು ಪವಿತ್ರ ನದಿ ಎಂದು ಪರಿಗಣಿಸುತ್ತಾರೆ ಮತ್ತು ಅದನ್ನು ಪೂಜಿಸುತ್ತಾರೆ. ಹರಿಯಾಣದ ಜನರು ನದಿ ನೀರಿನಲ್ಲಿ ವಿಷವನ್ನು ಏಕೆ ಬೆರೆಸುತ್ತಾರೆ? 2020 ರಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರು ಯಮುನಾ ನದಿಯನ್ನು ಮಾಲಿನ್ಯದಿಂದ ರಕ್ಷಿಸದಿದ್ದರೆ, ಅವರು ಎಂದಿಗೂ ಮತ ಕೇಳುವುದಿಲ್ಲ ಎಂದು ಸುಳ್ಳು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!