ಉದಯವಾಹಿನಿ, ಬಳ್ಳಾರಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಬಳ್ಳಾರಿ ಮತ್ತು ವೀರಶೈವ ವಿದ್ಯಾವರ್ಧಕ ಸಂಘ ಜಂಟಿಯಾಗಿ ನಿನ್ನೆ ಸಂಘದ ಸಭಾಂಗಣದಲ್ಲಿ ಐಸಿಎಐ ಸ್ಟಾರ್ಟ್ಅಪ್ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.
ಜನರು ಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಕಾರ್ಯಕ್ರಮ ಉದ್ಘಾಟಿಸಿ ಸ್ಟಾರ್ಟ್ಅಪ್ ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ವಕ್ತಾರರಾಗಿ ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನಾ ರಾಜ್ ಮಾತನಾಡಿದರು. ಸಂಘದ ಉಪಾಧ್ಯಕ್ಷ ಜಾನಕುಂಟೆ ಬಸವರಾಜ್, ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ರಾಜಶೇಖರ್. ಕೆ, ಆದಿತ್ಯ ಟೆಕ್ ಪಾರ್ಕ್ ನ ಜಿ. ಮಲ್ಲಿಕಾರ್ಜುನ್, ಕೆನರಾ ಬ್ಯಾಂಕ್ ನ ಡಿವಿಜನಲ್ ಮ್ಯಾನೇಜರ್
ರಾಧಾಕೃಷ್ಣ ರೆಡ್ಡಿ ಇವರುಗಳು ಮಾರ್ಗದರ್ಶನ ನೀಡಿದರು.
