ಉದಯವಾಹಿನಿ, ಬೆಂಗಳೂರು: ನಾವು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಇತ್ತೀಚಿನ ದಿನಗಳಲ್ಲಿ ಕೆಲ ಮತಾಂಧ ಶಕ್ತಿಗಳು ಸಂವಿಧಾನಕ್ಕೆ ಧಕ್ಕೆ ಉಂಟುಮಾಡುತ್ತಿದ್ದು, ಅದನ್ನು ರಕ್ಷಿಸುವ ಹೊಣೆ ಕಾಂಗ್ರೆಸ್ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಮಹಾತ ಗಾಂಧೀಜಿಯವರ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿ ಎಂದು ಹಿಂದುತ್ವದ ಆಧಾರದ ಮೇಲೆ ಹಿಂದೂಸ್ಥಾನ ನಿರ್ಮಾಣ ಮಾಡಲು ಬಿಜೆಪಿ ಮತ್ತು ಆರ್ಎಸ್ಎಸ್ ಮುಂದಾಗಿವೆ. ಇದು ಅಂಬೇಡ್ಕರ್, ಮಹಾತಗಾಂಧಿಯವರ ನಿಲುವುಗಳಿಗೆ ಪೂರಕವಾಗಿವೆ ಎಂದರು.
ಮಹಾತಗಾಂಧೀಜಿಯವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಭಾಗವಹಿಸಿ 100 ವರ್ಷ ಮುಗಿದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಶತಮಾನೋತ್ಸವ ಆಚರಿಸಲಾಯಿತು. ಇದೇ ವೇಳೆ ಸುವರ್ಣ ಸೌಧದ ಮುಂದೆ ಮಹಾತಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ಸರಿಸಿಕೊಂಡರು.
ಇಡೀ ವರ್ಷ ಮಹಾತಗಾಂಧೀಜಿಯವರ ನೆನಪಿನಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುವುದು. ಗಾಂಧೀಜಿಯವರ ಆಲೋಚನೆ, ಅಂಬೇಡ್ಕರ್ರವರ ಸಂವಿಧಾನ ದೇಶಕ್ಕೆ ಅನಿವಾರ್ಯ ಮತ್ತು ಅಗತ್ಯ ಎಂದರು.
ಬಿಜೆಪಿ ಮತ್ತು ಆರ್ಎಸ್ಎಸ್ನವರು ಮಹಾತಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯಂತ ಮತಾಂಧನನ್ನು ಆರಾಧಿಸುತ್ತಾರೆ. ಮಹಾತ ಗಾಂಧೀಜಿ ಇಲ್ಲದೇ ಇದ್ದಿದ್ದರೆ ದೇಶಕ್ಕೆ ಸ್ವಾತಂತ್ರ ಸಿಗುತ್ತಿರಲಿಲ್ಲ, ದಾಸ್ಯರಿಂದ ಮುಕ್ತರಾಗಿ ಬಿಜೆಪಿಯವರೂ ಸೇರಿದಂತೆ ದೇಶದ ಜನರಿಗೆ ಸ್ವಾತಂತ್ರ ಸಿಗಬೇಕಾದರೆ ಗಾಂಧೀಜಿಯವರೇ ಕಾರಣ. ಅಂತವರನ್ನೇ ಕೊಂದು ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!