ಉದಯವಾಹಿನಿ, ಬೆಂಗಳೂರು: ಬ್ಯಾಂಕುಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಉದ್ದಿಮೆಗಳಲ್ಲಿ ಕನ್ನಡಿಗರು ನೇಮಕಾತಿಗೆ ದೊರಕುತ್ತಿಲ್ಲ ಎಂಬ ಕೂಗಿನ ನಡುವೆ ನಿರುದ್ಯೋಗಿ ಕನ್ನಡಿಗರ ಅನುಕೂಲಕ್ಕಾಗಿ ಸರ್ಕಾರದಿಂದಲೇ ಉದ್ಯೋಗ ಪೋರ್ಟಲ್ ಸೃಜನೆ ಮಾಡುವ ಸಂಬಂಧ ಆಯ-ವ್ಯಯದಲ್ಲಿ ಘೋಷಣೆ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ. ಕುಶಲ ಕನ್ನಡಿಗ ಯೋಜನೆ ಅಡಿಯಲ್ಲಿ ಪ್ರತಿಭಾವಂತ ನಿರುದ್ಯೋಗಿ ಕನ್ನಡಿಗರು ತಮ ಸ್ವ-ವಿವರಗಳನ್ನು ದಾಖಲಿಸಲು ಸರ್ಕಾರವು ಪೋರ್ಟಲ್ ಸೃಜನೆಗೆ ಮುಂದಾದಲ್ಲಿ ಉದ್ಯೋಗದಾತ ಸಂಸ್ಥೆಗಳು ಅರ್ಹ ಅಭ್ಯರ್ಥಿಗಳನ್ನು ನೇರವಾಗಿ ಸಂಪರ್ಕಿಸಲು ಅನುಕೂಲವಾಗಲಿದೆ. ಇದರಿಂದ ಉದ್ದಿಮೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಹೆಚ್ಚಲಿದ್ದು, ಕನ್ನಡಿಗರ ನಿರುದ್ಯೋಗದ ಬವಣೆ ಕಡಿಮೆಯಾಗಲಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಹಿಂದೆ ಎಂಪ್ಲಾಯ್ಮೆಂಟ್ ನ್ಯೂಸ್ ಎಂಬ ಪತ್ರಿಕೆ ಬರುತ್ತಿದ್ದು, ಈಗ ಅದು ನಿಂತು ಹೋಗಿದೆ. ಕಾರಣ ಈ ಪೋರ್ಟಲ್ ಅತ್ಯವಶ್ಯ ಎಂದು ಭಾವಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!