ಉದಯವಾಹಿನಿ, ನವದೆಹಲಿ: 2024-25ರ ಆರ್ಥಿಕ ಸಮೀಕ್ಷೆ ಪ್ರಕಾರ ಮುಂದಿನ 2025-26ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 6.3ರಿಂದ 6.8ರ ನಡುವೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಸಂಸತ್ನಲ್ಲಿ ಮಂಡಿಸಿರುವ ಆರ್ಥಿಕ ಸಮೀಕ್ಷೆಯಲ್ಲಿ ಇದು ಬಹಿರಂಗಗೊಂಡಿದೆ. ಭಾರತದ ಆರ್ಥಿಕತೆಯು ಸ್ಥಿರವಾದ ಬೆಳವಣಿಗೆಯ ಹಾದಿಯಲ್ಲಿದೆ.
ಮುಂಬರುವ ವರ್ಷಗಳಲ್ಲಿ ದೇಶವು ತನ್ನ ಆರ್ಥಿಕ ಬೆಳವಣಿಗೆಯ ದರವನ್ನು ವೇಗಗೊಳಿಸಲು ಗುರಿಯನ್ನು ಹೊಂದಿರುವುದರಿಂದ, ದೇಶೀಯ ಕಾರ್ಪೊರೇಟ್ ಮತ್ತು ಹಣಕಾಸು ವಲಯಗಳಲ್ಲಿ ಬಲವಾದ ಆಯವ್ಯಯ ಪಟ್ಟಿಯನ್ನು ಹೊಂದಿದೆ. ಆದರೆ, ಜಾಗತೀಕರಣ ಹಿಂದೆ ಸರಿಯುತ್ತಿದೆ. ಆದ್ದರಿಂದ, ಮುಂದಿನ ಎರಡು ದಶಕಗಳಲ್ಲಿ ಬೆಳವಣಿಗೆಯ ಸರಾಸರಿಯನ್ನು ಹೆಚ್ಚಿಸಲು ಜನಸಂಖ್ಯಾ ಲಾಭಾಂಶವನ್ನು ಪಡೆಯುವ ಅಗತ್ಯವಿದೆ ಎಂದು ಆರ್ಥಿಕ ಸಮೀಕ್ಷೆ 2025 ಹೇಳಿದೆ.
ಸರ್ಕಾರದ ಪ್ರಯತ್ನಗಳಿಂದಾಗಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಿದ್ಧವಾಗಿದೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದರು. ತನ್ನ ಆಡಳಿತದ ಮಾರ್ಗದರ್ಶಿ ಸೂತ್ರಗಳನ್ನು ಪುನರುಚ್ಚರಿಸಿ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್ (ಎಲ್ಲರೊಂದಿಗೆ, ಎಲ್ಲರಿಗೂ ಅಭಿವೃದ್ಧಿ, ಎಲ್ಲರ ನಂಬಿಕೆ, ಎಲ್ಲರ ಪ್ರಯತ್ನ) ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೇಶವು ದೇಶದ ಗಡಿಗಳನ್ನು ರಕ್ಷಿಸಲು ಮತ್ತು ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಐತಿಹಾಸಿಕ ಕ್ರಮಗಳನ್ನು ತೆಗೆದುಕೊಂಡಿದೆ ಸರ್ಕಾರವು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ. ಮೇಕ್ ಇನ್ ಇಂಡಿಯಾದಿಂದ ನಾವು ಜಗತ್ತಿಗೆ ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ 6.3ರಿಂದ 6.8ರಷ್ಟು ಏರಿಕೆಯಾಗುವ ಸಂಭವವಿದೆ. ಇದೊಂದು ಆಶದಾಯಕ ಬೆಳವಣಿಗೆ. ಸರ್ಕಾರದ ದಿಟ್ಟ ಕ್ರಮಗಳಿಂದಾಗಿ ಇತರೆ ದೇಶಗಳಿಗೆ ಹೋಲಿಸಿದರೆ ನಾವು ಚೇತರಿಕೆ ಹಾದಿಯಲ್ಲಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದೇಶವು ಸಿದ್ದವಾಗಿದೆ ಎಂಬ ಅಂಶವು ಉಲ್ಲೇಖವಾಗಿದೆ.
