ಉದಯವಾಹಿನಿ, ನವದೆಹಲಿ: ಯಮುನಾ ನದಿಯಲ್ಲಿ ವಿಷ ಬೆರೆಸಿರುವ ಕುರಿತು ಚುನಾವಣಾ ಆಯೋಗ ನೀಡಿರುವ ನೋಟಿಸ್‌‍ಗೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಇಂದು ಇಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ಸಮಜಾಯಿಷಿ ನೀಡಿದರು.
ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರೊಂದಿಗೆ ಕೇಜ್ರಿವಾಲ್‌ ಅವರು ಇಸಿ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.ಇಸಿ ಮತ್ತು ಅದರ ಮುಖ್ಯ ಚುನಾವಣಾ ಆಯುಕ್ತರು ತಮ ಹೇಳಿಕೆಯ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್‌ ನಿನ್ನೆ ಆರೋಪಿಸಿದರು ಮತ್ತು ಹರಿಯಾಣದಿಂದ ದೆಹಲಿಗೆ ಸರಬರಾಜಾಗುವ ಯಮುನಾ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಅಮೋನಿಯಾ ಅಂಶವಿದೆ ಎಂದು ಆರೋಪಿಸಿದ್ದರು.
ಬಿಜೆಪಿ ಸರಕಾರವು ಯಮುನಾ ನೀರಿನಲ್ಲಿ ವಿಷ ಬೆರೆಸಿ ದೆಹಲಿಯಲ್ಲಿ ಹತ್ಯಾಕಾಂಡಕ್ಕೆ ಯತ್ನಿಸುತ್ತಿದೆ ಎಂಬ ಅವರ ಆರೋಪದ ಮೇಲೆ ಉತ್ತರ ಕೋರಿ ಇಸಿ ಅವರಿಗೆ ಎರಡು ನೋಟಿಸ್‌‍ಗಳನ್ನು ನೀಡಿತ್ತು.
ನವದೆಹಲಿ ಕ್ಷೇತ್ರದಿಂದ ದೆಹಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಕೇಜ್ರಿವಾಲ್‌‍, ಇಂದು ಬೆಳಿಗ್ಗೆ 11 ಗಂಟೆಯೊಳಗೆ ದೆಹಲಿ ಜಲ ಮಂಡಳಿಯ ಸಿಬ್ಬಂದಿ ಇಂಜಿನಿಯರ್‌ಗಳು, ಸ್ಥಳ ಮತ್ತು ವಿಷ ಪತ್ತೆ ಮಾಡುವ ವಿಧಾನದ ವಿವರಗಳನ್ನು ಹಂಚಿಕೊಳ್ಳಲು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!