ಉದಯವಾಹಿನಿ, ಚಿತ್ತಾಪೂರ: ತಾಲುಕಿನ ಐತಿಹಾಸಿಕ ನಾಲ್ವಾರ ಸದ್ಗುರು ಶ್ರೀ ಕೋರಿಸಿದ್ದೇಶ್ವರ ರಥ ಮೈದಾನದಲ್ಲಿ ಪುಷ್ಪಾಲಂಕಾರ ಗೊಂಡ ರಥೋತ್ಸವಕ್ಕೆ ಮಠದ ಪೀಠಾದಿಪತಿ ಡಾ. ಸಿದ್ದ ತೋಟೇಂದ್ರ ಶಿವಾಚಾರ್ಯರು ಧಾರ್ಮಿಕ ಪದ್ದತಿ ಅನುಸಾರ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಹಾರಾಜಕಿ ಜೈ ಎಂಬ ಜೈ ಘೋಷದೊಂದಿಗೆ ಸಾಗಿದ ರಥಕ್ಕೆ ನೆರೆದಿದ್ದ ಅಪಾರ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ತಮ್ಮ ಭಕ್ತಿ ಹರಕೆ ತೀರಿಸಿದರು.
