ಉದಯವಾಹಿನಿ, ಬೆಂಗಳೂರು: ನೀವು ಹೊರಗೆ ಹೋಗಬೇಕಾ ಚಿಂತಿಸಬೇಡಿ, ನಿಮ ಅನುಪಸ್ಥಿತಿಯಲ್ಲಿ ನಿಮ ಮನೆಯ ಮೇಲೆ ನಗರ ಪೊಲೀಸರು ನಿಗಾವಹಿಸಲಿದ್ದು, ಸದಾ ನಿಮ ಸೇವೆಯಲ್ಲಿರುತ್ತಾರೆ. ಬೆಂಗಳೂರು ನಗರದ ದಕ್ಷಿಣ ವಿಭಾಗದ ಪೊಲೀಸರು ನಗರದ ಸಾರ್ವಜನಿಕರ ಅನುಕೂಲಕ್ಕಾಗಿ ಈ ಒಂದು ಹೊಸ ಪ್ರಯೋಗವನ್ನು ಅಳವಡಿಸಿದ್ದಾರೆ.
ಮನೆಗೆ ಬೀಗ ಹಾಕಿಕೊಂಡು 2-3ದಿನ ಪ್ರವಾಸ ಅಥವಾ ದೇವಸ್ಥಾನ, ಊರುಗಳಿಗೆ ಹೋಗುವ ಸಂದರ್ಭದಲ್ಲಿ, ಇಲ್ಲವೇ ಸಮಾರಂಭಗಳಿಗೆ ಹೋಗುವ ಸಂದರ್ಭದಲ್ಲಿ
ಈ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ರವಾನೆ ಮಾಡಿ ಲಾಕ್‌್ಡ ಹೌಸ್ ಚೆಕಿಂಗ್ ಸಿಸ್ಟಮ್ (ಬೀಗ ಹಾಕಿರುವ ಮನೆಗಳ ಪರಿಶೀಲನಾ ಪದ್ಧತಿ) ನಲ್ಲಿ ನಿಮ ಅನುಪಸ್ಥಿತಿಯಲ್ಲಿ ನಿಮ ಮನೆಯ ಮೆಲೆ ನಿಗಾವಹಿಸಲು ಮಾಹಿತಿ ನೀಡಲು ಕೋರಲಾಗಿದೆ. ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ನಡೆಸುವ ಪತ್ರಿಕಾಗೋಷ್ಠಿಗಳಲ್ಲಿ ಸ್ವತ್ತು ಪ್ರಕರಣಗಳ ಬಗ್ಗೆ ಮಾತನಾಡುತ್ತಾ, ಮನೆಗಳನ್ನು ಹೇಗೆ ಸುರಕ್ಷಿತವಾಗಿ ಭದ್ರಪಡಿಸಿಕೊಳ್ಳಬೇಕೆಂಬುದನ್ನು ಪ್ರತಿಬಾರಿ ಹೇಳುತ್ತಾ ಸಾರ್ವಜನಿಕರನ್ನು ಎಚ್ಚರಿಸುತ್ತಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹೊಸ ಪ್ರಯೋಗಕ್ಕೆ ನಗರ ಪೊಲೀಸರು ಮುಂದಾಗಿದ್ದು, ಸದಾ ನಿಮ ಸೇವೆಯಲ್ಲಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!