ಉದಯವಾಹಿನಿ, ಆರ್ಲಿಂಗ್ಟನ್ : ವಾಷಿಂಗ್ಟನ್ ಬಳಿಯ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದ ಜೆಟ್‌ವಿಮಾನಕ್ಕೆ ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ್ದು ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ತುರ್ತು ಪಡೆ ಹಾಗು ರಕ್ಷಣಾ ಸಿಬ್ಬಂದಿ ಪೊಟೊಮ್ಯಾಕ್ ನದಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು,ಸಾವುನೋವುಗಳು ಅಥವಾ ಘರ್ಷಣೆಯ ಕಾರಣದ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಲಿಲ್ಲ, ಘಟನೆ ನಂತರ ವಾಷಿಂಗ್ಟನ್ ಬಳಿಯ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗಳನ್ನು ನಿಲ್ಲಿಸಲಾಗಿದ್ದು ಪ್ರದೇಶದಾದ್ಯಂತ ಬದುಕುಳಿದವರಿಗಾಗಿ ಹುಡುಕಾಟ ನಡೆದಿದೆ.
ವಿಮಾನ ನಿಲ್ದಾಣದ ಉತ್ತರದಲ್ಲಿರುವ ಜಾರ್ಜ್ ವಾಷಿಂಗ್ಟನ್ ಪಾರ್ಕ್‌ವೇ ಉದ್ದಕ್ಕೂ ಪೊಟೊಮ್ಯಾಕ್ ನದಿಯಲ್ಲಿ ರಕ್ಷಣಾ ದೋಣಿಗಳು ಬಿರುಸಿನ ಕಾರ್ಯಾಚರಣೆ ಕೈಗೊಂಡಿದೆ. ಟ್ರಂಪ್ ಈ ಭೀಕರ ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿ ದೇವರು ಅಗಲಿದವರ ಆತ್ಮಗಳನ್ನು ಆಶೀರ್ವದಿಸಲಿ ಎಂದು ಹೇಳಿದ್ದಾರೆ.ಫೆಡರಲ್ ಏವಿಯೇಷನ್ ಅಡಿನಿಸ್ಟ್ರೇಷನ್ ವಿಮಾನ ರಾತ್ರಿ 9 ಗಂಟೆಯ ಸುಮಾರಿಗೆ ಕನ್ಸಾಸ್‌ನ ವಿಚಿಟಾದಿಂದ ಹೊರಟು ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಸಮೀಪಿಸುತ್ತಿದ್ದಾಗ ಅಮೆರಿಕ ಸೇನೆಯ ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ.
