ಉದಯವಾಹಿನಿ, ಹಾಸನ: ಮೂಲ ದಾಖಲಾತಿಗಳಿದ್ದರೂ ತಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಲ್ಲಾಪುರ ಗ್ರಾಮದ ಮೋಹನ್ ಕುಮಾರ್ ಕುಟುಂಬ ಸದಸ್ಯರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮೋಹನ್ ಕುಮಾರ್, ಬೇಲೂರು ತಾಲ್ಲೂಕಿನ ಮಲಾಪುರ ಗ್ರಾಮದಲ್ಲಿ 4 ಎಕರೆ 20 ಗುಂಟೆ ಜಮೀನಿದ್ದು, ರುದ್ರಯ್ಯ ಅವರ ಹೆಸರಿನಲ್ಲಿ ಮೂಲ ದಾಖಲೆಗಳಿವೆ.
ಆದರೆ ಈ ಭೂಮಿಯಲ್ಲಿ ಓದೇಶ್ ಹಾಗೂ ಭೈರಯ್ಯ ಎಂಬುವರು ಅಕ್ರಮವಾಗಿ ಗುಡಿಸಲು ನಿರ್ಮಿಸಿದ್ದಾರೆ. ಈ ಸಂಬಂಧ ಅನೇಕ ಬಾರಿ ಸಂಬಂಧ ಪಟ್ಟ ತಹಶೀಲ್ದಾರ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
2-3 ಬಾರಿ ಸರ್ವೆ ನಡೆದಿದ್ದು, ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅತಿಕ್ರಮ ಪ್ರವೇಶ ಮಾಡಿರುವ ಒದೇಶ ಹಾಗೂ ಭೈರಯ್ಯ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ದೌರ್ಜನ್ಮ ಮಾಡುತ್ತಿದ್ದು. ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
