ಉದಯವಾಹಿನಿ, ಬಳ್ಳಾರಿ: ಮಧ್ಯ ಪ್ರದೇಶದ ಇಂದೋರ್ ನಗರಕ್ಕೆ ಹೋದವರು ಚಾಟ್ ಬಜಾರ್ ನ ಸವಿ ಸವಿಯದೇ ಬಾರರು. ಅದರಂತೆ ರಾತ್ರಿವೇಳೆ ನಮ್ಮ ನಗರದಲ್ಲೂ ಸೇಂಟ್ ಫಿಲೋಮಿನಾ ಹಿಂಭಾಗದ ರಸ್ತೆ ಸಂಜೆಯಾದರೆ ಇಂದೋರ್ ನ ಚಾಟ್ ಬಜಾರ ಸ್ವರೂಪ ಪಡೆಯುತ್ತದೆ.
ಇಲ್ಲಿ ವೆಜ್ ಅಂಡ್ ನಾನ್ ವೆಜ್ ಫುಟ್, ಚಾಟ್ಸ್, ನ್ನು ಸಿದ್ದಪಡಿಸಿ ನೀಡುವ ಹಲವು ಮಳಿಗೆಗಳಿಗೆ ಸಂಜೆ ಮತ್ರು ರಾತ್ರಿ ನೂರಾರು ಜನರು ಬಂದು ಇಲ್ಲಿನ ಸವಿಯನ್ನು ಸವಿಯುತ್ತಾರೆ.
ಹೆಚ್ಚಿನದಾಗಿ ಇಲ್ಲಿ ಯುವಕ ಯುವತಿಯರು ಬರುತ್ತಾರೆ. ಮಳಿಗೆಗಳ ಮುಂದೆ ಹಾಕಿರುವ ಚೇರ್ ಗಳಲ್ಲಿ ಕುಳಿತು ತಮಗಿಷ್ಡ ಬಂದ ಚಾಟ್ ಮತ್ತು ಆಹಾರದ ಆರ್ಡ್ ಮಾಡಿ ಸವಿದು ಕಾಲ ಕಳೆಯುತ್ತಾರೆ.
ಇದರ ದೃಶ್ಯ ನೋಡಿದರೆ ಇಂದೋರ್ ಚಾಟ್ ಬಜಾರ್ ನೆನಪಾಗುತ್ತದೆ. ಅಲ್ಲಿ ಹಗಲಿಡಿ ಷರಾಫ್ ಅಂದರೆ ಚಿನ್ನದ ವ್ಯಾಪಾರದ ವಹಿವಾಟು ನಡೆದರೆ ರಾತ್ರಿಯಲ್ಲಿ ಚಾಟ್ ಮಾರಾಟ ನಡೆಯುತ್ತದೆ. ಬಿನ್ನ ವಿಭಿನ್ನ ಚಾಟ್ ಗಳ ಸವಿ ಸವಿಯಬಹುದು.ಆದರೆ ಇಲ್ಲಿ ಹಗಲಿನಲ್ಲಿ ಅಂತಹ ವಹಿವಾಟು ಇಲ್ಲ ಸಂಜೆ ಮಾತ್ರ ಮಸಾಲ ತಿಂಡಿಗಾಗಿ ಯುವ ಜನತೆ ಮುಗಿ ಬೀಳುತ್ತಿರುವುದು ಕಂಡು ಬರುತ್ತದೆ.
