ಉದಯವಾಹಿನಿ, ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಮಹತ್ವದ ಬದಲಾವಣೆ ಆಗಿದೆ. ಅಂದರೆ ಪರಿಣಾಮವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳವಾಗಿದೆ. ಕೂಲ್ ಸಿಟಿ ಎಂದೇ ಹೆಸರು ಪಡೆದಿರುವ ರಾಜಧಾನಿಯಲ್ಲಿ ಸಾಮಾನ್ಯವಾಗಿ ಫೆಬ್ರವರಿಯಲ್ಲಿ ೨೫ ರಿಂದ ೨೬ ಡಿಗ್ರಿ ಸೆಲ್ಸಿಯಸ್ ದಾಖಲಾಗಬೇಕಿದ್ದ ತಾಪಮಾನ
ಈ ಬಾರಿ ೩೦ ಡಿಗ್ರಿಗೂ ಅಧಿಕ ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗಿದೆ ಎಂದು ವರದಿಯಾಗಿದೆ.
ಬೇಸಿಗೆಯ ಮೊದಲು ತಾಪಮಾನವು ನಾಲ್ಕು ಡಿಗ್ರಿಗಳಷ್ಟು ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ತಾಪಮಾನವನ್ನು ಸುಮಾರು ೩೦ ಡಿಗ್ರಿಗಳಷ್ಟು ದಾಖಲಿಸಲಾಗಿದೆ. ಚಳಿಗಾಲದ ಅಂತ್ಯದ ಮೊದಲೇ ಈ ಬಾರಿಯು ರಾಜಧಾನಿ ಜನತೆ ಇನ್ನಿಲ್ಲದಂತೆ ಮೈಸುಡುವ ಬಿಸಿಲ ಝಳ ಅನುಭಿವಿಸುವ ನಿರೀಕ್ಷೆ ಇದೆ.
ರಾಜ್ಯದಾದ್ಯಂತ ತಾಪಮಾನ ಹೆಚ್ಚಾಗಿದೆ.
ಉತ್ತರ ಕರ್ನಾಟಕದಲ್ಲಿ ೩೨-೩೪ ಡಿಗ್ರಿ ತಾಪಮಾನ ದಾಖಲಾಗಿದೆ. ಬೆಂಗಳೂರು ನಗರವು ಗರಿಷ್ಠ ೩೨.೫ ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ, ಕನಿಷ್ಠ ೧೬.೭ ಡಿಗ್ರಿ ಸೆಲ್ಸಿಯಸ್, ಆದರೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಗರಿಷ್ಠ ೩೨.೯ ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ೧೬.೦ ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ.ಎಚ್‌ಎಎಲ್ ವಿಮಾನ ನಿಲ್ದಾಣವು ಗರಿಷ್ಠ ೩೧.೫ ಡಿಗ್ರಿ ಸೆಲ್ಸಿಯಸ್ ಹೊಂದಿದೆ, ಕನಿಷ್ಠ ೧೬ ಡಿಗ್ರಿ ಸೆಲ್ಸಿಯಸ್. ರಾಜ್ಯದಲ್ಲಿ ಈ ಬಾರಿ ಬೇಸಿಗೆ ಅವಧಿಗಿಂತ ಮುಂಚಿತವಾಗಿಯೇ ಕಾಲಿಟ್ಟಿದೆ. ಬಿಸಿಲು ಮುಂದಿನ ದಿನಗಳಲ್ಲಿ ಬಿಸಿಲಿನ ಹೊಡೆತ ಹೇಗೆ ಇರಬಹುದು.
