ಉದಯವಾಹಿನಿ, ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ವಿಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಉಂಟಾಗಬಹುದಾದ ನೀರಿನ ಬವಣೆಯನ್ನು ನೀಗಿಸಲು ಮತ್ತು ನೀರಿನ ಸಮಸ್ಯೆ ಇರುವ ಕಡೆ ನಿಕಟಪೂರ್ವ ವಸತಿ ಸಚಿವರು ಶಾಸಕ ಎಂ. ಕೃಷ್ಣಪ್ಪ ರವರ ಅನುದಾನದಲ್ಲಿ ಹಲವು (ಬೋರ್ವೆಲ್) ಗಳನ್ನು ಕೊಳವೆ ಬಾವಿಗಳನ್ನು ಕೊರೆದು ಮನೆಗಳಿಗೆ ನೀರಿನ ಸಂಪರ್ಕವನ್ನು ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಎಂ ಕೃಷ್ಣಪ್ಪರವರು ನೀರನ್ನ ಮಿತವಾಗಿ ಬಳಸಿ, ಬೇಸಿಗೆ ಹತ್ತಿರ ಬರುತ್ತಿದೆ ಅವಶ್ಯಕತೆಗಿಂತ ಹೆಚ್ಚು ನೀರನ್ನು ಬಳಸಬೇಡಿ , ದಿನೇ ದಿನೇ ನೀರಿನ ಅಂತರ್ಜಲ ಕುಸಿಯುತ್ತಿದ್ದು ಪ್ರತಿಯೊಬ್ಬರೂ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಂಡು ನೀರಿನ ಅಂತರ್ಜಲವನ್ನು ವೃದ್ಧಿಸಬೇಕೆಂದು, ಮತ್ತು ಬಳಕೆಯ ನೀರನ್ನು ಶುದ್ಧೀಕರಿಸಿ ಪುನರ್ ಬಳಕೆ ಮಾಡಬೇಕೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
