ಉದಯವಾಹಿನಿ, ಗುರುಮಠಕಲ್: ಭಕ್ತರ ಎಲ್ಲ ಸಂಕಷ್ಟ ದೂರವಾಗಲು ಪ್ರತಿವರ್ಷದಂತೆ ಈ ವರ್ಷವು ಹಮ್ಮಿಕೊಂಡಿರುವ ಶಿವಾ ಪಾರ್ವತಿ ಕಲ್ಯಾಣ ಮಹಾ ಉತ್ಸವ ಮತ್ತು ಅಗ್ನಿ ಪ್ರವೇಶ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿರುವುದುಕ್ಕೆ ತೆಲಂಗಾಣದ ಶ್ರೀ ಪ್ರಭು ಗುರುಸ್ವಾಮೀಜಿ ಅವರು ಸಂತೋಷ ವ್ಯಕ್ತಪಡಿಸಿದರು.
ತೆಲಗಾಂಣದ ಗಡಿ ಭಾಗದಲ್ಲಿರುವ ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಕೋನೆ ಗ್ರಾಮವಾದ ನಸಲವಾಯಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಸಂಕಷ್ಟದಿಂದ ದೂರವಾಗಲಿ, ಈ ವರ್ಷದ ಫಸಲುಗಳು ಉತ್ತಮವಾಗಿ ಬೆಳೆದು ರೈತರು ಸಂತಸದಿಂದ ಜೀವನ ನಡೆಸಲಿ ಎಂದು ಶುಭ ಹಾರೈಸಿದರು.
ಇಂತಹ ದಾರ್ಮಿಕ ಕಾರ್ಯಕ್ರಮಗಳಿಂದ ಭಕ್ತರಲ್ಲಿ ಹೋಸ ಸಕಾರಾತ್ಮ ಚಿಂತನೆ ಮೂಡಿ ಅವರಲ್ಲಿ ದೈಹಿಕ ಮಾನಸಿಕ ಬದಲಾವಣೆ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಭಕ್ತರು ಇಂತಹ ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅಖಿಲ ಭಾರತ ಕೋಲಿ ಸಮಾಜದ ರಾಜ್ಯ ಸಂಘಟನೆ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಮನುಷ್ಯ ಜೀವನದಲ್ಲಿ ನೆಮ್ಮದಿ ಸುಖ ಶಾಂತಿ ತರಲಿದೆ. ವರ್ಷದಲ್ಲಿ ಎರಡು ದಿನ ನಿರಂತರ ಪೂಜೆ ಕೈಕಂರ್ಯಗಳ ಮಾಡುವ ಮೂಲಕ ಈ ಭಾಗದ ಹತ್ತಾರು ಹಳ್ಳಿಗೆ ನಸವಾಯಿ ಗ್ರಾಮಸ್ಥರು ಮಾದರಿಯಾಗಿರುವುದು ಸ್ಲಾಘನೀಯವಾಗಿದೆ ಎಂದರು.
ಗಡಿಭಾಗ ಆದ ಕಾರಣ ಈ ಭಾಗದ ಜನರು ಕಡ್ಡಯವಾಗಿ ಕನ್ನಡದಲ್ಲಿ ಮಾತನಾಡಲು ರೂಡಿಸಿಕೊಳ್ಳಬೇಕು. ಗಡಿಭಾಗ ಈ ಗ್ರಾಮದಲ್ಲಿ ಕೃಷಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳ ಜೋತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣದ ಮತ್ತು ಸಂಸ್ಕಾರ ನೀಡಲು ಮುಂದಾಗಬೇಕು ಎಂದು ಕರೆ ನೀಡಿದ್ದರು.
