ಉದಯವಾಹಿನಿ, ಹರಪನಹಳ್ಳಿ : ಹುತಾತ್ಮರ ದಿನದಂದು ನಾವು ನೀವು ಎಲ್ಲರೂ ಮಹಾತ್ಮರನ್ನು ಗೌರವಿಸುವ ಶುಭಾ ದಿನವಾಗಿದ್ದು, ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಷಾರಾಣಿ ಆರ್. ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ಪುರಸಭೆ ಕಾರ್ಯಲಯ ಹರಪನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧಿಜಿಯವರ ಹುತಾತ್ಮ ದಿನಾಚರಣೆಯ ಅಂಗವಾಗಿ ಉಭಯ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯಾಲಯದ ಆವರಣದಲ್ಲಿ ಕಾರ್ಮಿಕರ ಜೊತೆ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.ಆರೋಗ್ಯ ನಿರೀಕ್ಷಕರಾದ ಮಂಜುನಾಥ್ ಬಿ. ಮಾತನಾಡಿ, ಕಸವನ್ನು ಏಕ ಬಳಿಕ ನಿರ್ಮಿತ ಕಸವನ್ನು ವಿಲೀನ ಮಾಡುವುದರ ಮೂಲಕ ಪಟ್ಟಣ ಮತ್ತು ನಗರವನ್ನು ಪೌರ ಕಾರ್ಮಿಕರು ಗಾಂಧಿಯವರ ಕನಸನ್ನು ನನಸು ಮಾಡುತ್ತಿದ್ದಾರೆ ಇಂತಹ ದಿನದಂದು ಕಾರ್ಯನಿರ್ವಹಿಸುವುದು ಉತ್ತಮ ಎಂದರು.ಈ ಸಂದರ್ಭದಲ್ಲಿ ಸವಿಲ್ ನ್ಯಾಯಾಧೀಶರಾದ ಮನುಶರ್ಮ ಎಸ್.ಪಿ. ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್, ಉಪಾಧ್ಯಕ್ಷ ಮಂಜುನಾಥ್ ಎಸ್.ಬಾಗಳಿ, ಕಾರ್ಯದರ್ಶಿ ಎಂ . ಮಲ್ಲಪ್ಪ, ಸರ್ಕಾರಿ ಅಭಿಯೋಜಕರಾದ ಮೀನಾಕ್ಷಿ ಎನ್. ನಿರ್ಮಲ.ಡಿ. ಜಂಟಿ ಕಾರ್ಯದರ್ಶಿ ಸಿ.ರಾಜಪ್ಪ ಸೇರಿದಂತೆ ಕಾರ್ಮಿಕರು ಮತ್ತು ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.
