ಉದಯವಾಹಿನಿ, ಹಳೇಬೀಡು: ಹೊಯ್ಸಳ ಶಿಲ್ಪದಂತೆ ಕಲಾತ್ಮಕವಾಗಿರುವ ಇಲ್ಲಿನ ಕರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಫೆ. 5 ರಿಂದ 7ರವರೆಗೆ ಮೂರು ದಿನ ನಡೆಯಲಿದ್ದು, ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.ವೇದಿಕೆ ಕಾರ್ಯಕ್ರಮ, ಊಟೋಪಚಾರ. ಪೆಂಡಾಲ್ ಹಾಗೂ ವಾಹನ ಪಾರ್ಕಿಂಗ್‌ಗೆ 10 ಎಕರೆ ಜಮೀನು ಸಮತಟ್ಟು ಮಾಡಲಾಗಿದೆ. 2 ಎಕರೆ ಜಾಗದಲ್ಲಿ ವೇದಿಕೆ ನಿರ್ಮಿಸಲು ಸಿದ್ಧತೆ ನಡೆದಿದೆ. ವಾಹನ ಪಾರ್ಕಿಂಗ್‌ಗಾಗಿ ಜಾವಗಲ್ ರಸ್ತೆಯಲ್ಲಿ ಎರಡೂ ಕಡೆ 6 ಎಕರೆ ಜಾಗ ಮೀಸಲಿರಿಸಲಾಗಿದೆ. ಭಕ್ತರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಛೇರ್ಮನ್ ಕುಮಾರ್ ಹೇಳಿದರು.
ಮಿತ್ತೂರಿನ ವೇದಮೂರ್ತಿ ದೈವಜ್ಞ ಕೇಶವಭಟ್ಟ, ನರಸಿಂಹ ಭಟ್ಟ ನೇತೃತ್ಯದ ಪುರೋಹಿತರ ತಂಡ ಮೂರು ದಿನ ಹೋಮ, ಹವನ ಹಾಗೂ ವಿಶೇಷ ಪೂಜೆ ನಡೆಸಲಿದ್ದಾರೆ ಫೆ.5 ಮತ್ತು 6 ರಂದು ತಲಾ 5ಸಾವಿರ ಜನ. ಫೆ. 7 ರಂದು 25ಸಾವಿರ ಜನ ಸೇರುವ ನಿರೀಕ್ಷೆ ಇದೆ. ಮೂರು ದಿನ ಬೆಳಿಗ್ಗೆ, ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.ವೇದಿಕೆ ಕಾರ್ಯಕ್ರಮ ವೀಕ್ಷಿಸಲು ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಉಪಾಧ್ಯಕ್ಷ ಎಚ್.ಎಂ. ಗಣೇಶ್ ಹೇಳಿದರು. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯ್ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಆರ್.ಅನಿಲ್ ಕುಮಾರ್, ಸಬ್ ಇನ್‌ಸ್ಪೆಕ್ಟರ್ ಸಿದ್ದಲಿಂಗ ಬಾನಸೆ ಸಂಚಾರ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ.
