ಉದಯವಾಹಿನಿ, ಬೆಂಗಳೂರ: ಬಿಎಂಟಿಸಿ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ, ಡಿಜಿಟಲ್ ಮೂಲಕ ಟಿಕೆಟ್ ಖರೀದಿಸಿ ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯುವ ಸೌಲಭ್ಯ ನೀಡಲಾಗಿದೆ.
ಬಿಎಂಟಿಸಿ ಡಿಜಿಟಲ್ ಅಭೂತಪೂರ್ವ ಸಾಧನೆ ಮಾಡಿದೆ , ಫೆಬ್ರವರಿ ೩ ರಂದು ಯುಪಿಐ ಮೂಲಕ ಒಂದೇ ದಿನದಲ್ಲಿ ಒಂದು ಕೋಟಿ ಆದಾಯವನ್ನುಗಳಿಸಿದೆ.
ಬಿಎಂಟಿಸಿ ಮಾಹಿತಿಯ ಪ್ರಕಾರ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಯಾಣಿಕರು ಯುಪಿಐನಿಂದ ಟಿಕೆಟ್ ಪಡೆಯುತ್ತಿದ್ದಾರೆ.ಜನವರಿ ೫ ರಿಂದ ಸರ್ಕಾರಿ ಸಾರಿಗೆ ಬಸ್ಸುಗಳ ದರ ಶೇಕಡಾ ೧೫ ರಷ್ಟು ಹೆಚ್ಚಾಗಿದೆ.
ಜನವರಿ ೯ರಂದು ೫೬.೬ ಲಕ್ಷ, ಜನವರಿ ೧೩ರಂದು ೬೦.೦೫ ಲಕ್ಷ, ಜನವರಿ ೨೦ರಂದು ೮೦.೦೧ ಲಕ್ಷ, ಜನವರಿ ೨೭ರಂದು ೯೦.೯, ಫೆಬ್ರವರಿ ೩ ರಂದು ೧.೦೩ ಕೋಟಿ ಆದಾಯ ಯುಪಿಐ ಮೂಲಕ ಬಿಎಂಟಿಸಿ ಸಂಸ್ಥೆಗೆ ಆದಾಯ ಬಂದಿದೆ. ಬಿಎಂಟಿಸಿ ಬಸ್ಸುಗಳಲ್ಲಿ ಕ್ಯೂಆರ್ ಕೋಡ್ ೨೦೨೩ ರಿಂದ ಪರಿಚಯಿಸಲಾಗಿದೆ. ಮೊದಲ ಯುಪಿಐ ಮೂಲಕ ಶೇಕಡಾ ೧೦ರಷ್ಟು ಆದಾಯ ಯುಪಿಐ ಮೂಲಕ ಬಂದಿದೆ. ಈಗ ಶೇಕಡಾ ೩೦ ರಷ್ಟು ಆದಾಯ ಯುಪಿಐ ಮೂಲಕ ಬರುತ್ತಿದೆ
ಪ್ರತಿ ಬಿಎಂಟಿಸಿ ಬಸ್‌ನಲ್ಲಿ ಯುಪಿಐ ಮೂಲಕ ಟಿಕೆಟ್ ದರ ಪಾವತಿಸಲು ಸೌಲಭ್ಯವಿದೆ. ಪ್ರಯಾಣಿಕರ ಮತ್ತು ನಿರ್ವಾಹಕರ ನಡುವಿನ ಯಾವುದೇ ಗೊಂದಲವಿಲ್ಲದೆ, ಸಮಸ್ಯೆ ಉಂಟಾಗದೇ ನೆಮ್ಮದಿಯ ಪ್ರಯಾಣಕ್ಕೆ ಅನುಕೂಲವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
